Tuesday, July 14, 2026
Homeಕರಾವಳಿಉಡುಪಿಉಡುಪಿ; ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಶವವಾಗಿ ನದಿಯಲ್ಲಿ ಪತ್ತೆ

ಉಡುಪಿ; ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಶವವಾಗಿ ನದಿಯಲ್ಲಿ ಪತ್ತೆ

- Advertisement -
- Advertisement -

ಉಡುಪಿ : ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪೆರ್ಡೂರು ಅಲಂಗಾರು ಬಳಿ ನಡೆದಿದೆ. ಪೆರ್ಡೂರು ನಿವಾಸಿ ಶ್ರೀಶನ್ ಶೆಟ್ಟಿ (15) ಮೃತ ವಿದ್ಯಾರ್ಥಿ.

ಶ್ರೀಶನ್ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ. ನಿನ್ನೆ ತನ್ನ ಸ್ನೇಹಿತನೊಂದಿಗೆ ಅಲಂಗಾರು ಬಳಿಯ ನದಿಗೆ ಈಜಲು ಹೋಗಿದ್ದನು. ಈ ವೇಳೆ ಶ್ರೀಶನ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ .ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!