Friday, May 3, 2024
Homeತಾಜಾ ಸುದ್ದಿಕೊಲೆಯಾಗಿದ್ದಾಳೆ ಅಂದುಕೊಂಡ ಯುವತಿ ಹೇಗೆ ಪ್ರತ್ಯಕ್ಷವಾದ್ಳು ನೋಡಿ..

ಕೊಲೆಯಾಗಿದ್ದಾಳೆ ಅಂದುಕೊಂಡ ಯುವತಿ ಹೇಗೆ ಪ್ರತ್ಯಕ್ಷವಾದ್ಳು ನೋಡಿ..

spot_img
- Advertisement -
- Advertisement -

ಲಕ್ನೋ: ಒಂದೂವರೆ ವರ್ಷಗಳ ಹಿಂದೆ ಕೊಲೆಯಾಗಿದ್ದಳು ಎಂದು ನಂಬಲಾಗಿದ್ದ ಯುವತಿ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಉತ್ತರ ಪ್ರದೇಶದ ಅನ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಲಾಪುರ ಗ್ರಾಮದಲ್ಲಿ 2019ರ ಫೆ.6ರಂದು ಕಮಲೇಶ್‌ ಎಂಬ ಯುವತಿ ಕಾಣಿಯಾಗಿದ್ದಳು. ಈ ಕುರಿತು ಆಕೆಯ ಸಹೋದರ ರಾಹುಲ್‌ ಪೊಲೀಸರಿಗೆ ದೂರು ನೀಡಿದ್ದರು.

2019ರ ಫೆ.18ರಂದು ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಮಲೇಶ್‌ಳ ತಂದೆ ಸುರೇಶ್‌ ಹಾಗೂ ಆಕೆಯ ಸಹೋದರ ರೂಪ್‌ ಕಿಶೋರ್‌ ಸೇರಿದಂತೆ ಮೂವರನ್ನು ಜೈಲಿಗೆ ಕಳುಹಿಸಲಾಗಿತ್ತು. ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಓಡಿ ಹೋಗಿ ಸಹ ಜೀವನ ನಡೆಸುತ್ತಿದ್ದಾಳೆ. ಈ ಜೋಡಿಗೆ ಮಗು ಕೂಡ ಇದೆ. ಯುವತಿಯ ತಂದೆ, ಸಹೋದರನನ್ನು ಜೈಲಿನಲ್ಲಿರಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಕುರಿತು ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಯುವತಿಯ ಪೋಷಕರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!