Sunday, June 7, 2026
Homeಕರಾವಳಿಉಡುಪಿಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಚಿವರು, ಶಾಸಕರು

ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಚಿವರು, ಶಾಸಕರು

- Advertisement -
- Advertisement -

ಬೆಂಗಳೂರು: ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಚಿವರು ಮತ್ತು ಶಾಸಕರು ಇಂದು ವೀಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಶಾಸಕರು ವೀಕ್ಷಣೆ ಮಾಡಿದರು.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಮತ್ತು ಬಿಜೆಪಿ ಶಾಸಕರು ಜೊತೆಯಾಗಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ಸಂಜೀವ ಮಟಂದೂರು, ಹರೀಶ್ ಪೂಂಜಾ, ಉಮಾನಾಥ್ ಕೋಟ್ಯಾನ್, ಕೆ.ಜಿ. ಬೋಪಯ್ಯ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಶಾಸಕರು ಇಂದು ಸಿನಿಮಾ ವೀಕ್ಷಿಸಿದ್ದಾರೆ.

ಇಂದು ವಿಧಾನಮಂಡಲ ಕಲಾಪ ಮುಕ್ತಾಯದ ಬಳಿಕ ವಿಧಾನಸೌಧದಿಂದ ನೇರವಾಗಿ ಮಂತ್ರಿ ಮಾಲ್ ಗೆ ವೋಲ್ವೋ ಬಸ್ ಮೂಲಕ ಶಾಸಕರು ಮತ್ತು ಸಚಿವರನ್ನು ಕರೆದೊಯ್ಯಲಾಗಿತ್ತು.‌

- Advertisement -

Latest News

error: Content is protected !!