Thursday, April 18, 2024
Homeತಾಜಾ ಸುದ್ದಿಕೊರೊನಾ ಕುರಿತು ಮಾಹಿತಿ ನೀಡುವಂತೆ ಸುರೇಶ್ ಕುಮಾರ್ ಗೆ ಸೂಚನೆ

ಕೊರೊನಾ ಕುರಿತು ಮಾಹಿತಿ ನೀಡುವಂತೆ ಸುರೇಶ್ ಕುಮಾರ್ ಗೆ ಸೂಚನೆ

spot_img
- Advertisement -
- Advertisement -

ಬೆಂಗಳೂರು : ಕೊರೊನಾ ಕುರಿತು ಹೆಲ್ತ್ ಬುಲೆಟಿನ್ ನ ಮಾಹಿತಿ ನೀಡುವ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಮತ್ತೊಮ್ಮೆ ಬದಲಿಸಿದ್ದಾರೆ. ನಾಳೆಯಿಂದ ಕೊರೊನಾ ಸೋಂಕು ಬಗ್ಗೆ ಎಲ್ಲ ಮಾಹಿತಿ ನೀಡುವಂತೆ ಸಿಎಂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.

ಕೊರೊನಾ ಸೋಂಕು ಕುರಿತಂತೆ ಸಚಿವರಾದ ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್ ಅವರಿಂದ ದ್ವಂದ್ವ ಹೇಳಿಕೆ ಕೇಳಿಬರುತ್ತಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ ಹೆಲ್ತ್ ಬುಲೆಟಿನ್ ಜವಾಬ್ದಾರಿಯನ್ನು ಸಿಎಂ ಸಚಿವ ಸುಧಾಕರ್ ಅವರಿಗೆ ವಹಿಸಿದ್ದರು. ಆದರೂ ಮತ್ತೆ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಈ ಹೆಲ್ತ್ ಬುಲೆಟಿನ್ ತಿಳಿಸುವ ಹೊಣೆಗಾರಿಕೆಯನ್ನು ಸುರೇಶ್ ಕುಮಾರ್ ಹೆಗಲಿಗೆ ವಹಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಕೊರೊನಾ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿತ್ತು. ಇನ್ಮುಂದೆ ಈ ಜವಾಬ್ದಾರಿಯನ್ನು ಸುರೇಶ್ ಕುಮಾರ್ ನಿರ್ವಹಿಸಲಿದ್ದಾರೆ. ಇಂದು ಕೊರೊನಾ ತಡೆ ಕುರಿತು ಸಚಿವರೊಂದಿಗೆ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಿಎಂ, ಸಚಿವ ಸುರೇಶ್ ಕುಮಾರ್ ಅವರಿಗೆ ಕೊರೊನಾ ಸೋಂಕು ಕುರಿತಾದ ಜವಾಬ್ದಾರಿಯನ್ನು ನೀಡಿದ್ದಾರೆ.

- Advertisement -
spot_img

Latest News

error: Content is protected !!