Friday, May 24, 2024
Homeತಾಜಾ ಸುದ್ದಿಮುಸ್ಲಿಂ ಮುಖಂಡರೊಂದಿಗಿನ ಸಿಎಂ ಯಡಿಯೂರಪ್ಪ ಸಭೆಯ ಮುಖ್ಯಾಂಶಗಳು

ಮುಸ್ಲಿಂ ಮುಖಂಡರೊಂದಿಗಿನ ಸಿಎಂ ಯಡಿಯೂರಪ್ಪ ಸಭೆಯ ಮುಖ್ಯಾಂಶಗಳು

spot_img
- Advertisement -
- Advertisement -

ರಾಜ್ಯದಲ್ಲಿ ಮಾರಕ ಕೊರೊನಾ ನಿಯಂತ್ರಣ ಕುರಿತು ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏತನ್ಮಧ್ಯೆ, ದೆಹಲಿಯ ಜಮಾತ್ ಸಭೆಯಲ್ಲಿ ಪಾಲ್ಗೊಂಡು ವಾಪಾಸ್ ಆಗಿರುವವರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಜಮೀರ್‌ ಅಹಮ್ಮದ್ ಖಾನ್, ಎನ್‌.ಎ ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ಸಿಎಂ ಇಬ್ರಾಹೀಂ ಸೇರಿದಂತೆ ಪ್ರಮುಖ ಮುಖಂಡರು ಪಾಲ್ಗೊಂಡರು. ಈ ವೇಳೆ, ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲೀಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಯಿತು. 

ರಾಜ್ಯದಿಂದ ಸಭೆಗೆ ತೆರಳಿದ್ದವರನ್ನು ಗುರುತಿಸಿ ಅವರಲ್ಲರ ತಪಾಸಣೆ ನಡೆಸಿದ್ದು, ಅವರ ಸಂಪರ್ಕದಲ್ಲಿದ್ದವರೂ ಸೇರಿದಂತೆ ಎಲ್ಲರನ್ನು ಕ್ವಾರೆಂಟೈನ್ ನಲ್ಲಿಡಲಾಗಿದೆ. ಈ ನಿಟ್ಟಿನಲ್ಲಿ ಜನರು ಸಹಕಾರ ನೀಡಬೇಕು ಎಂದು ಸಿಎಂ ಮನವಿ ಮಾಡಿದರು. ಅಲ್ಲದೇ, ಮಾರಕ ಸೋಂಕು ನಿಯಂತ್ರಿಣಕ್ಕೆ ಸರ್ಕಾರದ ಜೊತೆಗೆ ಮುಸ್ಲಿಂ ಸಮುದಾಯವರು ಎಲ್ಲ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಕರೋನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವ ವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಇದರೊಂದಿಗೆ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಬೆಂಗಳೂರಿನ ಸಾದಿಕ್ ಲೇಔಟ್‌ನಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆಯೂ ಚರ್ಚಿಸಲಾಯಿತು

- Advertisement -
spot_img

Latest News

error: Content is protected !!