ಬೆಂಗಳೂರು : ದೇಶಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ತಿಂಡಿ, ಊಟಕ್ಕೆ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಉಚಿತ ತಿಂಡಿ, ಊಟ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಹೀಗಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಲಾಕ್ ಡೌನ್ ನಂತ್ರ ತಿಂಡಿ, ಊಟ ಪ್ರೀ ಆಗಿ ದೊರೆಯುತ್ತಿತ್ತು. ಆದ್ರೇ ಇದಕ್ಕೆ ಬ್ರೇಕ್ ಹಾಕಿರುವ ರಾಜ್ಯ ಸರ್ಕಾರ ಮೊದಲಿನಂತೆಯೇ ರೂ.5ಕ್ಕೆ ತಿಂಡಿ, ರೂ.10ಕ್ಕೆ ಊಟ ನೀಡುವಂತ ತೀರ್ಮಾನವನ್ನು ಕೈಗೊಂಡಿದೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯಲ್ಲಿ, ಇಂದಿರಾ ಕ್ಯಾಂಟೀನ್ ಉಚಿತ ಊಟಕ್ಕೆ ಬ್ರೇಕ್ ಹಾಕಲಾಗಿದೆ. ಇಂದಿರಾ ಕ್ಯಾಂಟಿನ್ ಊಟಕ್ಕೆ ಹಣ ನಿಗಧಿ ಮಾಡುವಂತ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಇಂದಿರಾ ಕ್ಯಾಂಟೀನ್ ನಮಗೆ ಅಗತ್ಯ ಇಲ್ಲ. ಇದರಿಂದಾಗಿ 1.65 ಕೋಟಿ ಖರ್ಚಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ತಿಂಡಿಗೆ ರೂ.5, ಊಟಕ್ಕೆ ರೂ.10 ಹಣ ನಿಗಧಿ ಮಾಡುವಂತ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ನಾಳೆಯಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರೀ ಊಟ ಸಿಗೋದಿಲ್ಲ.