- Advertisement -
- Advertisement -
ಮಂಗಳೂರು : ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಈ ಕೆಳಗೆ ನಮೂದಿಸಿದ ಹುದ್ದೆಗಳನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಏಪ್ರಿಲ್07 ರಂದು ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಇಲ್ಲಿ ನೇರ ಸಂದರ್ಶನಕ್ಕೆ ನಡೆಯಲಿದೆ.
ಹೀಗಿದೆ ಹುದ್ದೆಯ ವಿವರ, ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ
- ವೈದ್ಯರು/ತಜ್ಞರು – 10 ಹುದ್ದೆಗಳು
ವೇತನ ; 60 ಸಾವಿರ,
ವಿದ್ಯಾರ್ಹತೆ ; MMS/ ಯಾವುದೆ ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಆಗಿರಬೇಕು)
- ಶುಶ್ರೂಷಕರು – 20 ಹುದ್ದೆಗಳು
ವೇತನ ; 20 ಸಾವಿರ,
ವಿದ್ಯಾರ್ಹತೆ ; ಕರ್ನಾಟಕ ಸರ್ಕಾರದಿಂದ ನೋಂದಾಯಿತ ಸಂಸ್ಥೆಗಳಿಂದ GNM ಪದವಿ ಪಡೆದಿರಬೇಕು.
- ಪ್ರಯೋಗ ಶಾಲಾ ತಜ್ಞರು – 5 ಹುದ್ದೆಗಳು
ವೇತನ ; 15 ಸಾವಿರ
ವಿದ್ಯಾರ್ಹತೆ ; ಕರ್ನಾಟಕ ಅರೆವೈದ್ಯಕೀಯ ಮಂಡಳಿಯಿಂದ 2 ಅಥವಾ 3 ವರ್ಷಗಳ ಕಿ.ವೈ.ಪ್ರ.ಶಾ ತಂತ್ರಜ್ಞರ ತರಬೇತಿ (DMLT) ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಪಡೆದಿರಬೇಕು.
- ಗ್ರೂಪ್ ಡಿ – 10 ಹುದ್ದೆಗಳು
ವೇತನ ; 12 ಸಾವಿರ
ವಿದ್ಯಾರ್ಹತೆ : SSLC ತೇರ್ಗಡೆಯಾಗಿರಬೇಕು.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳು ಹೊಂದಿರಬೇಕು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮಂಗಳೂರು ಅಥವಾ ದೂರವಾಣಿ ಸಂಖ್ಯೆ : 0824-2423672 ಸಂಪರ್ಕಿಸಲು ದ.ಕ. ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆ ತಿಳಿಸಿದೆ.
- Advertisement -