ಕೇರಳ ಮತ್ತು ಮಂಗಳೂರು ಗಡಿಯ ರಸ್ತೆ ಬಂದ್ ಕುರಿತು ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಿತು. ವಿಚಾರಣೆ ನಡೆಸಿದ ಎಲ್. ನಾಗೇಶ್ವರ ರಾವ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ, ಆದಷ್ಟು ಬೇಗ 2 ರಾಜ್ಯ ಸರ್ಕಾರಗಳು ಸೌಹಾರ್ದಯುತವಾಗಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ
ಎರಡೂ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೇರಳದಿಂದ ಕರ್ನಾಟಕಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ತೀರ್ಮಾನಿಸಲು ನ್ಯಾಯಾಲಯ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಆದೇಶ ನೀಡಿದೆ.
ಕೊರೊನಾ ಸೋಂಕಿನಿಂದ ಕರ್ನಾಟಕ ಸೇಫ್ ಆಗುವ ದೃಷ್ಠಿಯಿಂದ ಕ್ರಮಕೈಗೊಂಡಿದ್ದೇವೆ ಹಾಗೂ ಯಾವೆಲ್ಲ ಕಾರಣಕ್ಕೆ ಗಡಿ ರಸ್ತೆಯನ್ನು ಬಂದ ಮಾಡಲಾಗಿದೆ ಎನ್ನುವುದನ್ನು ಕರ್ನಾಟಕದ ಪರ ವಕೀಲರು ಎಂದು ನ್ಯಾಯಪೀಠದ ಮುಂದೆ ಮನದಟ್ಟುಮಾಡುವಲ್ಲಿ ಯಶಸ್ವಿಯಾದರು. ಇದೇ ವೇಳೆ ನ್ಯಾಯಪೀಠ ಈ ಕುರಿತು ಮುಂದಿನ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದೆ.
ಕಾಸರಗೋಡಿನಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೆಚ್ಚಿನ ಕಾಸರಗೋಡು ಮೂಲ ನಿವಾಸಿಗಳು, ಮಂಗಳೂರು ಪೇಟೆ ಮತ್ತು ಜನರೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರಗಳು ಗಡಿಯ ರಸ್ತೆ ತೆರವು ಕಾರ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನಾಗರಿಕರು ಆಶಾವಾದದಲ್ಲಿ ಕಾಯುತ್ತಿದ್ದಾರೆ.