ಮೈಸೂರು : ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಮೇಣದ ಬತ್ತಿಯ ದೀಪ ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ನಡುವೆ ಪ್ರಧಾನಿ ಮೋದಿಯವರ ಕರೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿಜಿಯವರ ಕರೆಯ ಹಿನ್ನಲೆಯಲ್ಲಿ ನಾಳೆ ಮೈಸೂರು ನಗರ ಅಧ್ಯಕ್ಷ ನೇತೃತ್ವದಲ್ಲಿ ದೀಪ ಮತ್ತು ಕ್ಯಾಂಡಲ್ ಅನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಟ್ವೀಟ್ ಮಾಡಿ ವಿವಾದವನ್ನು ತಮ್ಮ ಮೇಲೆ ಎಳೆದುಕೊಂಡಿದ್ದರು.
ಇನ್ನು ಸಂಸದರ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕ ವಿರೋಧ ವ್ಯಕ್ತವಾಗುತ್ತಿದ್ದು, ಸಂಸದರ ನಡೆಯನ್ನು ಹಲವು ಮಂದಿ ವಿರೋಧ ವ್ಯಕ್ತಪಡಿಸಿ, ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಸದರು ಜನತೆಗೆ ನೀಡಬೇಕಾಗಿರುವುದನ್ನು ನೀಡುವುದಕ್ಕೆ ಮುಂದಾಗುತ್ತಿಲ್ಲ ಬದಲಿಗೆ ಅವರು ಈ ರೀತಿ ಸುಖ ಸುಮ್ಮನೆ ಟ್ವಿಟ್ ಮಾಡುತ್ತಿರುವುದು ಏತಕ್ಕೆ, ಮೊದಲು ಅವರು ತಮ್ಮ ಸ್ಥಾನಕ್ಕೆ ಇರುವ ಪ್ರಾಮುಖ್ಯತೆಯನ್ನು ತಿಳಿದುಕೊಂಡು ನಡೆದುಕೊಳ್ಳಲಿ ಎಂದು ಜನತೆ ಬುದ್ದಿಹೇಳುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಂಸದರ ಟ್ವೀಟ್ ಗೆ ವಿರೋಧ ವ್ಯಕ್ತವಾಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಪ್ರತಾಪ್ ಸಿಂಹ ಅವರು ತಮ್ಮ ವಿವಾದತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.