- Advertisement -
- Advertisement -
ಮಂಗಳೂರು ನಗರದ ಉಳ್ಳಾಲದ ಕುತ್ತಾರು ಸಮೀಪದ ಮದ್ಯದಂಗಡಿಯ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಮದ್ಯ ಕಳುವಾಗಿರುವ ಬೆನ್ನಲ್ಲೇ ದೇರಳಕಟ್ಟೆಯಲ್ಲಿನ ಪಾನೀರು ಚರ್ಚ್‌ಗೂ ಕನ್ನ ಹಾಕಿ ಹಣ ದೋಚಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚ್ ಬಾಗಿಲು ಮುರಿದ ಖದೀಮರು ಕನ್ನ ಹಾಕಿದ್ದು, ಪರಮಪ್ರಸಾದ ಇರಿಸುವ ಲಾಕರ್ ಒಡೆದು ಕಾಣಿಕೆ ಹಣವನ್ನು ದೋಚಿದ್ದಾರೆ. ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -