Saturday, June 13, 2026
Homeಕರಾವಳಿಉಡುಪಿಉಡುಪಿ: ಸಿದ್ದರಾಮಯ್ಯನವರ ಮುಖವಿಟ್ಟುಕೊಂಡು ಹೋಗೋದಿಲ್ಲ: ಮೋದಿಯವರ ಮುಖವಿಟ್ಟುಕೊಂಡು ಬರ್ತಿದ್ದಾರೆ: ಸಿದ್ದರಾಮಯ್ಯ ಟ್ವೀಟ್‌ಗೆ ಸಚಿವ ಕೋಟ ತಿರುಗೇಟು

ಉಡುಪಿ: ಸಿದ್ದರಾಮಯ್ಯನವರ ಮುಖವಿಟ್ಟುಕೊಂಡು ಹೋಗೋದಿಲ್ಲ: ಮೋದಿಯವರ ಮುಖವಿಟ್ಟುಕೊಂಡು ಬರ್ತಿದ್ದಾರೆ: ಸಿದ್ದರಾಮಯ್ಯ ಟ್ವೀಟ್‌ಗೆ ಸಚಿವ ಕೋಟ ತಿರುಗೇಟು

- Advertisement -
- Advertisement -

ಉಡುಪಿ: ಯುವ ಜನೋತ್ಸವ ಕಾರ್ಯಕ್ರಮ ನಿಮಿತ್ತ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸ್ತಾ ಇದ್ದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಲೇವಡಿ ಮಾಡಿದ್ದಾರೆ.

ಯಾವ ಮುಖವಿಟ್ಟುಕೊಂಡು ಮೋದಿ ರಾಜ್ಯಕ್ಕೆ ಬರ್ತಿದ್ದಾರೆ ಅಂತಾ ಸಿದ್ದರಾಮಯ್ಯ  ಟ್ವೀಟ್ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಮೋದಿಯವರು ಇವತ್ತು ವಿವೇಕಾನಂದ ಜನ್ಮದಿನಾಚರಣೆಯಲ್ಲಿ ಕರ್ನಾಟಕದಲ್ಲಿ ಉದ್ಘಾಟನೆ ಮಾಡ್ತಿದ್ದಾರೆ ಅನ್ನೋದು ರಾಜ್ಯಕ್ಕೆ ದೇಶಕ್ಕೆ ಸಂತೋಷದ ವಿಚಾರ. ಇಡೀ ಕರ್ನಾಟಕ ಒಟ್ಟಾಗಿ ಅವರನ್ನ ಸ್ವಾಗತಿಸುತ್ತಿದೆ. ಮೋದಿ ಆಗಮನದಂದ ರಾಜಕೀಯವಾಗಿ ಮತ್ತು ಸರ್ಕಾರಕ್ಕೆ ಅತ್ಯಂತ ಹೆಚ್ಚು ಶಕ್ತಿಯನ್ನ ಕೊಡ್ತಿದೆ. ಸಿದ್ದರಾಮಯ್ಯನವರ ಮುಖವಿಟ್ಟುಕೊಂಡು ಹೋಗೋದಿಲ್ಲ, ಮೋದಿಯವರ ಮುಖವಿಟ್ಟುಕೊಂಡು ಬರ್ತಿದ್ದಾರೆ ಅಂತಾ ಸಿದ್ದುಗೆ ತಿರುಗೇಟು ನೀಡಿದ್ದಾರೆ.

- Advertisement -

Latest News

error: Content is protected !!