Friday, June 5, 2026
Homeತಾಜಾ ಸುದ್ದಿಸಿಡಿ ಸುಳಿಯಲ್ಲಿ ಸಾಹುಕಾರ: ಪ್ರತಿಕ್ರಿಯೆ ನೀಡಲು ಸಿಡಿಮಿಡಿಗೊಂಡ ಸಚಿವ ಸುರೇಶ್ ಕುಮಾರ್

ಸಿಡಿ ಸುಳಿಯಲ್ಲಿ ಸಾಹುಕಾರ: ಪ್ರತಿಕ್ರಿಯೆ ನೀಡಲು ಸಿಡಿಮಿಡಿಗೊಂಡ ಸಚಿವ ಸುರೇಶ್ ಕುಮಾರ್

- Advertisement -
- Advertisement -

‌ ಬೆಂಗಳೂರು: ಜಲಸಂಪನ್ಮೂಲ ಸಚಿವ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿದ್ದು, ಸಚಿವರ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿವೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಡಿಮಿಡಿಗೊಂಡರು. ಮದುವೆಗೆ ಬಂದಿದ್ದೇನೆ ನಮಗೂ ಖಾಸಗಿ ಬದುಕಿದೆ. ಇದೊಂದು ನಾನ್‌ಸೆನ್ಸ್‌ ಎಂದು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

ಇದು ನಾನ್‌ಸೆನ್ಸ್ ಅಲ್ಲ, ಸಚಿವರೊಬ್ಬರ ಮೇಲೆ ಬಂದ ಆರೋಪ. ನೀವು ಪ್ರತಿಕ್ರಿಯೆ ಕೊಡಿ ಎಂದು‌ ಮಾಧ್ಯಮ ಪ್ರತಿನಿಧಿಗಳು ಹೇಳಿದಾಗ, ಸಚಿವರು ಈ ವಿಚಾರದ ಬಗ್ಗೆ ಪಕ್ಷದ ಹಿರಿಯರು ನಿರ್ಧರಿಸುತ್ತಾರೆ. ರಾಜೀನಾಮೆ ಕೊಡುವ ವಿಚಾರ ಸಚಿವ ರಮೇಶ್‌ಗೆ ಬಿಟ್ಟಿದ್ದು. ಹೈಕಮಾಂಡ್ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೆ ಎಂದು ಹೇಳಿದರು.

- Advertisement -

Latest News

error: Content is protected !!