Wednesday, May 1, 2024
Homeತಾಜಾ ಸುದ್ದಿಸಚಿವ ಸಿ.ಟಿ.ರವಿಗೂ ಕೊರೊನಾ ಪಾಸಿಟಿವ್ ಎಂದ ಸಚಿವ ಸುಧಾಕರ್

ಸಚಿವ ಸಿ.ಟಿ.ರವಿಗೂ ಕೊರೊನಾ ಪಾಸಿಟಿವ್ ಎಂದ ಸಚಿವ ಸುಧಾಕರ್

spot_img
- Advertisement -
- Advertisement -

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಭರತ್ ಶೆಟ್ಟಿ ಪ್ರಾಣೇಶ್, ಅಜೇಯ್ ಸಿಂಗ್, ಶರತ್​ ಬಚ್ಚೇಗೌಡ ಪುಟ್ಟಣ್ಣಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಕಾಡಿದ ಕೊರೋನಾ ವೈರಸ್ ಇದೀಗ ಪ್ರವಾಸೋದ್ಯಮ ಸಚಿವ ಸಿಟಿ ರವಿಗೂ ಕೊರೊನಾ ಸೋಂಕು ವಕ್ಕರಿಸಿದೆ.

ಸಿ.ಟಿ.ರವಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಸಿ.ಟಿ.ರವಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದರು. ನೆಗೆಟಿವ್ ವರದಿ ಬಂದ ಬಳಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕೊರೊನಾ ಆತಂಕದ ಹಿನ್ನೆಲೆ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರಿಗೆ ಕೊರೊನಾ ವೈರಸ್ ತಗುಲಿದೆ. ಸೋಂಕು ಖಚಿತವಾಗುತ್ತಿದ್ದಂತೆ ಹೋಮ್ ಕ್ವಾರಂಟೈನ್‌ಗೆ ಸಿಟಿ ರವಿ ಒಳಪಟ್ಟಿದ್ದಾರೆ.

ಈ ಕುರಿತು ಸ್ವತಃ ಸಿಟಿ ರವಿ ಅವರು ಟ್ವೀಟ್ ಮಾಡಿದ್ದು, ”ನಾನು ಕ್ಷೇಮವಗಿದ್ದೇನೆ. ಕೊರೊನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ, ಕರ್ನಾಟಕದಲ್ಲಿ ಈಗಾಗಲೇ ಏಂಟು ಜನ ರಾಜಕೀಯ ನಾಯಕರಿಗೆ ಕೊವಿಡ್ ತಗುಲಿದೆ. ಮಾಜಿ ಕೇಂದ್ರ ಸಚಿವ, ದಕ್ಷಿಣ ಕನ್ನಡದ ಮಾಜಿ ಸಂಸದ ಜನಾರ್ದನ ಪೂಜಾರಿ, ಮಾಜಿ ಉಪಸಭಾಪತಿ ಪುಟ್ಟಣ್ಣ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಕುಣಿಗಲ್ ಶಾಸಕ ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯ, ಚಿಕ್ಕಮಗಳೂರಿನ ಪ್ರಾಣೇಶ್ ಎಂ.ಕೆ, ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಕೊವಿಡ್ ಅಂಟಿಕೊಂಡಿದೆ.

- Advertisement -
spot_img

Latest News

error: Content is protected !!