Monday, June 8, 2026
Homeತಾಜಾ ಸುದ್ದಿಮುಂಬೈ: ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರನ್ನು ಬಂಧಿಸಿದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್

ಮುಂಬೈ: ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರನ್ನು ಬಂಧಿಸಿದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್

- Advertisement -
- Advertisement -

ಮುಂಬೈ: ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿರುವ ಕಾನ್ಪುರದ ನಟೋರಿಯಸ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರನ್ನು ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ಜುಹೂ ಎಟಿಎಸ್ ತಂಡ ಬಂಧಿಸಿದ್ದಾರೆ ಎಂದು ಎಟಿಎಸ್‌ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ದೇಶಮಾನೆ ತಿಳಿಸಿದ್ದಾರೆ.

ಅರವಿಂದ್ ಅಲಿಯಾಸ್ ಗುಡ್ಡಾನ್ ತ್ರಿವೇದಿ ಹಾಗೂ ಆತನ ಚಾಲಕ ಸುಶೀಲ್ ಕುಮಾರ್ ಅಲಿಯಾಸ್ ಸೋನು ತಿವಾರಿಯ ಬಂಧಿತರು.

ಉತ್ತರಪ್ರದೇಶದ ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ಇವರಿಬ್ಬರು ಶಾಮೀಲಾಗಿದ್ದರು. ನಂತರ ಮುಂಬೈನಲ್ಲಿ ತಲೆಮರೆಯಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಟಿಎಸ್ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ. ಇಬ್ಬರ ಮೇಲೆ ಐಪಿಸಿ ಸೆಕ್ಷನ್ 302, 307 ಹಾಗೂ 120(ಬಿ) ದಾಖಲಾಗಿದೆ.

- Advertisement -

Latest News

error: Content is protected !!