Wednesday, June 3, 2026
Homeಕರಾವಳಿಮಂಗಳೂರು: ಸಚಿವರಿದ್ದ ಕಾರ್ಯಕ್ರಮದ ಸ್ಟೇಜ್ ಕುಸಿತ, ನದಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಸಚಿವ ಯೋಗೇಶ್ವರ್

ಮಂಗಳೂರು: ಸಚಿವರಿದ್ದ ಕಾರ್ಯಕ್ರಮದ ಸ್ಟೇಜ್ ಕುಸಿತ, ನದಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಸಚಿವ ಯೋಗೇಶ್ವರ್

- Advertisement -
- Advertisement -

ಮಂಗಳೂರು: ಉತ್ಸವವೊಂದರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆ ದಿಢೀರ್ ಕುಸಿದಿದ್ದು, ರಾಜ್ಯದ ಸಚಿವರು ಹಾಗೂ ಇತರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ವೇದಿಕೆಯನ್ನು ನದಿಯ ಪಕ್ಕದಲ್ಲೇ ಹಾಕಲಾಗಿದ್ದರಿಂದ ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ದುರಂತ ಸಂಭವಿಸಿರಬಹುದಾದ ಸಾಧ್ಯತೆ ಇತ್ತು.

ಸಸಿಹಿತ್ಲುನ ನಂದಿನಿ ಕಡಲತೀರದಲ್ಲಿ ಆಯೋಜಿಸಿದ್ದ ನಂದಿನಿ ಉತ್ಸವವನ್ನು ಉದ್ಘಾಟನೆ ಮಾಡಲು ಪರಿಸರ ಸಚಿವ ಯೋಗೇಶ್ವರ್ ಆಗಮಿಸಿದ್ದು, ನಂದಿನಿ ನದಿಯ ತಟದಲ್ಲಿ ಹಾಕಿರುವ ವೇದಿಕೆಯ ಮೇಲೆ ಇತರ ಅತಿಥಿಗಳೊಡನೆ ಮೇಲೇರುತ್ತಿದ್ದಂತೆ ವೇದಿಕೆ ಏಕಾಏಕಿ ಕುಸಿದಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ವೇದಿಕೆ ಕುಸಿಯುತ್ತಿದ್ದಂತೆ ಸಚಿವರು ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಸಹಿತ ಅತಿಥಿಗಳು ಕೆಳಗೆ ಬಿದ್ದಿದ್ದು ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅತಿಥಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು.

ಸ್ಟೇಜ್ ನದಿ ಭಾಗಕ್ಕಿಂತ ಹಿಂಬದಿಗೆ ಮುರಿದು ಬಿದ್ದ ಪರಿಣಾಮ ಸಚಿವರು ಸೇರಿ ಇತರ ಗಣ್ಯರು ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು.

- Advertisement -

Latest News

error: Content is protected !!