Sunday, April 28, 2024
Homeಜ್ಯೋತಿಷ್ಯಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಮಹಿಳೆಯರಿಗೆ ಇಂದು ನೆಮ್ಮದಿಯ ದಿನ..

ಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಮಹಿಳೆಯರಿಗೆ ಇಂದು ನೆಮ್ಮದಿಯ ದಿನ..

spot_img
- Advertisement -
- Advertisement -

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಸಪ್ತಮಿ,
ನಕ್ಷತ್ರ: ಮೃಗಶಿರಾ,

ಮೇಷ:
ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವದು. ಎಚ್ಚರಿಕೆವಹಿಸಿರಿ.
ಶುಭಸಂಖ್ಯೆ: 9

ವೃಷಭ:
ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವದು. ವೈವಾಹಿಕ ಚಿಂತೆ ಇರುವದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ.ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ.
ಶುಭಸಂಖ್ಯೆ: 4

ಮಿಥುನ:
ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ.
ಶುಭಸಂಖ್ಯೆ: 3

ಕರ್ಕ:
ಕೈಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುವವು. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವದು. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವದು.
ಶುಭಸಂಖ್ಯೆ: 7

ಸಿಂಹ:
ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು.ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವದು. ಆರೋಗ್ಯದ ಮೇಲೆ ನಿಗಾ ಇರಲಿ.
ಶುಭಸಂಖ್ಯೆ: 5

ಕನ್ಯಾ:
ಉದ್ಯೋಗ ಬದಲಿ ಮಾಡುವದು ಸದ್ಯ ಬೇಡ.ಹಣದ ಕೊರತೆ ಇರಲಾರದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಪಿತ್ರಾರ್ಜಿತ ಆಸ್ತಿ ದೊರೆಯುವ ಯೋಗವಿದೆ. ತಂದೆತಾಯಿಯ ವಿಷಯದಲ್ಲಿ ಚಿಂತೆ ಇರುವದು.
ಶುಭಸಂಖ್ಯೆ: 8

ತುಲಾ:
ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ.
ಶುಭಸಂಖ್ಯೆ: 1

ವೃಶ್ಚಿಕ:
ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವದು. ಕೇಡುಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ.
ಶುಭಸಂಖ್ಯೆ: 9

ಧನು:
ಅನಾವಶ್ಯಕ ತಿರುಗಾಟದಿಂದ ಆಲಸ್ಯ. ದುರ್ಜನರ ಸಹವಾಸ ದೋಷ ಕಂಡುಬರುವದು. ಐಷಾರಾಮಿ ವಸ್ತುಗಳ ಖರೀದಿ ಸಂಭವ. ವ್ಯಾಪಾರ-ಉದ್ಯಮಗಳಲ್ಲಿ ತೃಪ್ತಿದಾಯಕ ಲಾಭವಿರುವದು. ವಿದ್ಯಾರ್ಥಿಗಳಿಗೆ ಹಿನ್ನಡೆ ಇರುವದು.
ಶುಭಸಂಖ್ಯೆ: 7

ಮಕರ:
ಕುಟುಂಬದಲ್ಲಿ ಮನಸ್ತಾಪ ಕಂಡುಬರುವದು. ಗೌಪ್ಯ ವ್ಯವಹಾರಗಳನ್ನು ಸರಿದೂಗಿಸಲು ಸಾಧ್ಯವಾಗದೇ ಪರಿತಪಿಸುವಿರಿ. ಆಸಕ್ತಿ ಆಪತ್ತು ತರುವ ಸಂಭವವಿದೆ. ಮಹತ್ವದ ನಿರ್ಧಾರಗಳಿಗೆ ಇದು ಸೂಕ್ತಕಾಲವಲ್ಲ. ಹಣಹೂಡಿಕೆ ಈಗ ಬೇಡ.
ಶುಭಸಂಖ್ಯೆ: 4

ಕುಂಭ:
ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವದು.
ಶುಭಸಂಖ್ಯೆ: 8

ಮೀನ:
ವ್ಯಯಕ್ತಿಕ ಧನಲಾಭ, ಶುಭ ಸಮಾರಂಭ, ಸರಕಾರಿ ಕೆಲಸಗಳು ಆಗುವವು. ಉದ್ಯೋಗದಲ್ಲಿ ಉನ್ನತಿ ಇರುವದು. ವ್ಯಾಪಾರದಲ್ಲಿ ಹಣಹೂಡಿಕೆಗೆ ಉತ್ತಮ. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವದು.
ಶುಭಸಂಖ್ಯೆ: 5

- Advertisement -
spot_img

Latest News

error: Content is protected !!