Thursday, June 4, 2026
Homeತಾಜಾ ಸುದ್ದಿಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ವೇಳೆ ಕೈಕೊಟ್ಟ ಮೈಕ್!: ನಿಮ್ಮನ್ನು ಸಿದ್ದರಾಮಯ್ಯ ಕಳಿಸಿದ್ರಾ...

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ವೇಳೆ ಕೈಕೊಟ್ಟ ಮೈಕ್!: ನಿಮ್ಮನ್ನು ಸಿದ್ದರಾಮಯ್ಯ ಕಳಿಸಿದ್ರಾ ಡಿಕೆಶಿ ಕಳಿಸಿದ್ರಾ ಅಂತಾ ಮೈಕ್ ಆಪರೇಟರ್ ಕಾಲೆಳೆದ ಕಟೀಲ್

- Advertisement -
- Advertisement -

ಧಾರವಾಡ: ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ವೇಳೆ ಮೈಕ್ ಕೈ ಕೊಟ್ಟಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಇಂದು ಸಂಜೆ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಈ ಘಟನೆ ನಡೆದಿದೆ.

ಈ ವೇಳೆ ನಿನ್ನದು ಯಾವ ಊರಪ್ಪಾ ಎಂದು ನಳೀನ್ ಕುಮಾರ್ ಕಟೀಲ್ ಸೌಂಡ್ ಸಿಸ್ಟಮ್ ಆಪರೇಟ್ ಮಾಡುತ್ತಿದ್ದ ಯುವಕನಿಗೆ ತಮಾಷೆಯಾಗಿ ಕೇಳಿದ್ದಾರೆ.

ನಾನು ಹುಬ್ಬಳ್ಳಿಯವನು ಎಂದ ಯುವಕನಿಗೆ ನೀನು ಕನಕಪುರದಿಂದ ಬಂದಿದ್ದೀಯಾ ಅಂತಾ ಕಟೀಲ್ ನಗೆ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ನಿಮ್ಮನ್ನು ಸಿದ್ದರಾಮಯ್ಯ ಕಳಿಸಿದ್ದಾರಾ ಅಥವಾ ಡಿ.ಕೆ. ಶಿವಕುಮಾರ್ ಕಳಿಸಿದ್ದಾರಾ ಅಂತಾ ನಳೀನ್ ಕುಮಾರ್ ಕಟೀಲ್ ಕಾಲೆಳೆದಿದ್ದಾರೆ.

- Advertisement -

Latest News

error: Content is protected !!