Thursday, June 4, 2026
Homeಕರಾವಳಿಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಸಸಿಹಿತ್ಲು ಬೀಚ್ ನಲ್ಲಿ ಪತ್ತೆ

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಸಸಿಹಿತ್ಲು ಬೀಚ್ ನಲ್ಲಿ ಪತ್ತೆ

- Advertisement -
- Advertisement -

ಮಂಗಳೂರು : ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಸಸಿಹಿತ್ಲು ಮುಂಡ ಬೀಚ್ ನಲ್ಲಿ ಪತ್ತೆಯಾಗಿದೆ. ಮುಕ್ಕ ನಿವಾಸಿ ಕಿರಣ್ ಶೆಟ್ಟಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಕಿರಣ್ ಶೆಟ್ಟಿ ನಾಪತ್ತೆಯಾಗಿದ್ದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಿರಣ್ ಶೆಟ್ಟಿ ಪಾಲುದಾರಿಕೆಯಲ್ಲಿ ಅಂಗಡಿ ನಡೆಸುತ್ತಿದ್ದರು. ಕೋವಿಡ್ ಕಾರಣದಿಂದ ವ್ಯಾಪಾರ ಇಲ್ಲದೆ ಹಣದ ಸಮಸ್ಯೆಯಿಂದ ಇದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ನಾಪತ್ತೆಯಾದ ಬಗ್ಗೆ ಕಿರಣ್ ಶೆಟ್ಟಿ ಮನೆಯವರು ಸಂಬಂಧಿಕರ ಬಳಿ, ಗೆಳೆಯರಲ್ಲಿ ವಿಚಾರಿಸಿದ್ದರು. ಆದರೆ ಇಂದು ಕಿರಣ್ ಶೆಟ್ಟಿ ಶವವಾಗಿ ಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!