Saturday, May 18, 2024
Homeಕರಾವಳಿಮಂಗಳೂರು: ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿ 1.67 ರೂ. ದರ ಏರಿಕೆಗೆ ಮೆಸ್ಕಾಂ ಪ್ರಸ್ತಾವ

ಮಂಗಳೂರು: ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿ 1.67 ರೂ. ದರ ಏರಿಕೆಗೆ ಮೆಸ್ಕಾಂ ಪ್ರಸ್ತಾವ

spot_img
- Advertisement -
- Advertisement -

ಮಂಗಳೂರು: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) 2021- 22ನೇ ಸಾಲಿನಲ್ಲಿ ಪ್ರತಿ ಯೂನಿಟ್ ಗೆ ಸರಾಸರಿ 1.67 ರೂ. ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮೆಸ್ಕಾಂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ವರ್ಗಗಳ ವಿದ್ಯುತ್ ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯುತ್ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದ್ದು. ಈಗಿನ ದರಗಳಿಂದ ಮೆಸ್ಕಾಂ ಆದಾಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಈ ದರ ಏರಿಕೆಯ ಪ್ರಸ್ತಾವ ಮಾಡಲಾಗಿದೆ.

ಮೆಸ್ಕಾಂ ಕಳೆದ ಸಾಲಿನಲ್ಲಿ ಸರಾಸರಿ 62 ಪೈಸೆ ವಿದ್ಯುತ್ ದರ ಏರಿಸುವಂತೆ ಆಯೋಗಕ್ಕೆ ಪ್ರಸ್ತಾವ ಮಂಡಿಸಿತ್ತು. ಅನಂತರ ಆಯೋಗವು ಸರಾಸರಿ 40 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಮೆಸ್ಕಾಂ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ.

ದರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಅವಕಾಶ ಇದೆ. ಆಕ್ಷೇಪಣೆಗಳನ್ನು ನಿಗದಿತ ನಮೂನೆಯಲ್ಲಿ ಸ್ವೀಕೃತಿ ಅಧಿಕಾರಿ, ಕೆಇಆರ್‌ಸಿ, 16ಸಿ-1, ಮಿಲ್ಲರ್‌ ಟ್ಯಾಂಕ್‌ ಬೆಡ್‌ ಏರಿಯಾ, ವಸಂತ ನಗರ, ಬೆಂಗಳೂರು ಇವರಿಗೆ 6 ಸೆಟ್‌ಗಳಲ್ಲಿ ಸಲ್ಲಿಸಿ ಒಂದು ಪ್ರತಿಯನ್ನು ಅಧೀಕ್ಷಕ ಎಂಜಿನಿಯರ್‌ (ವಾಣಿಜ್ಯ), ಕಾರ್ಪೊರೇಟ್‌ ಕಚೇರಿ, ಮೆಸ್ಕಾಂ ಭವನ, ಬಿಜೈ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು.

- Advertisement -
spot_img

Latest News

error: Content is protected !!