Sunday, May 5, 2024
Homeತಾಜಾ ಸುದ್ದಿಗ್ರಾ.ಪಂ ಅಧಿಕಾರಾವಧಿಯಲ್ಲಿ ಬದಲಾವಣೆ: ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿಗೆ ಮಾರ್ಗಸೂಚಿ

ಗ್ರಾ.ಪಂ ಅಧಿಕಾರಾವಧಿಯಲ್ಲಿ ಬದಲಾವಣೆ: ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿಗೆ ಮಾರ್ಗಸೂಚಿ

spot_img
- Advertisement -
- Advertisement -

ಬೆಂಗಳೂರು: ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕಟವಾಗಿದ್ದು, ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿ ಮಾಡಲು ಮಾರ್ಗಸೂಚಿ ಹೊರಡಿಸಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಗಳ ಬದಲಿಗೆ ಎರಡೂವರೆ ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಹೊಸದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗುವವರು 30 ತಿಂಗಳು ಆಡಳಿತ ನಡೆಸಬಹುದಾಗಿದೆ.

ಉಳಿದ ಅವಧಿಗೆ ಮತ್ತೆ ಹೊಸದಾಗಿ ಮೀಸಲಾತಿ ಪ್ರಕಟಿಸಲಾಗುತ್ತದೆ. ರಾಜ್ಯದ 5956 ಗ್ರಾಪಂಗಳಿಗೆ ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿಪಡಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈ ಸಮುದಾಯಗಳ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ. ತಾಲ್ಲೂಕುವಾರು ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಎಸ್‌.ಸಿ., ಎಸ್‌ಟಿ, ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಹೆಚ್ಚಿರುವ ಗ್ರಾ.ಪಂ.ಗಳಲ್ಲೇ ಈ ವರ್ಗಗಳಿಗೆ ಅವಕಾಶ ಕಲ್ಪಿಸಬೇಕು.

ಒಂದು ವರ್ಗಕ್ಕೆ ಸೇರಿದ ಸದಸ್ಯರ ಸಂಖ್ಯೆ ಸಮನಾಗಿರುವ ಗ್ರಾ.ಪಂಗಳ ಸಂಖ್ಯೆ ಹೆಚ್ಚು ಇದ್ದಲ್ಲಿ, ಲಾಟರಿ ಮೂಲಕ ನಿರ್ಧರಿಸಬೇಕು. ಎಸ್‌.ಸಿ., ಎಸ್‌.ಟಿ., ಹಿಂದುಳಿದ ವರ್ಗ(ಎ), ಹಿಂದುಳಿದ ವರ್ಗ (ಬಿ), ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ವರ್ಗಗಳಿಗೆ ಅನುಕ್ರಮವಾಗಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಬೇಕು ಎನ್ನಲಾಗಿದೆ.

ಅಧ್ಯಕ್ಷ ಹುದ್ದೆ ನಂತರ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿ ಮಾಡಬೇಕು. ಎರಡೂ ಹುದ್ದೆಗೆ ಒಂದೇ ಮೀಸಲಾತಿ ನಿಗದಿಯಾಗಬಾರದು, ತಾಲ್ಲೂಕಿನ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ನಿರ್ದೇಶನ ನೀಡಿದೆ.

- Advertisement -
spot_img

Latest News

error: Content is protected !!