Thursday, July 23, 2026
Homeಕರಾವಳಿಬಂಟ್ವಾಳ: ಬಾವಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

ಬಂಟ್ವಾಳ: ಬಾವಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ‘ಬಾವಿಯೊಂದು ನಾಪತ್ತೆಯಾಗಿದೆ, ಹುಡುಕಿಕೊಡಿ’ ಎಂಬ ದೂರು ದಾಖಲಾಗಿದೆ.


ಈ ದೂರು ನೀಡಿದವರು ನರಿಕೊಂಬು ಗ್ರಾಮದ ಪಂಚಾಯತ್ ಪಿ.ಡಿ.ಒ.ಯೆಸ್.ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಬಾವಿ ಕಾಣೆಯಾಗಿದ್ದು ಇದನ್ನು ಹುಡುಕಿಕೊಡುವಂತೆ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ನರಿಕೊಂಬು ಗ್ರಾಮದ ನೇಲ್ಯಡ್ಕ ನಿವಾಸಿ ದಯಾನಂದ ಪೂಜಾರಿ ಎಂಬವರು ಆ ಬಾವಿಯನ್ನು ಮಣ್ಣು ಹಾಕಿ ಮುಚ್ಚಿ ಅತಿಕ್ರಮಣ ಮಾಡಿದ್ದಾರೆ ಎಂದು ಪಿಡಿಒ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -

Latest News

error: Content is protected !!