Wednesday, June 3, 2026
Homeಕರಾವಳಿಬೆಳ್ತಂಗಡಿ: ಮರದ ರೆಂಬೆ ಕಡಿಯುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಸಾವು

ಬೆಳ್ತಂಗಡಿ: ಮರದ ರೆಂಬೆ ಕಡಿಯುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಸಾವು

- Advertisement -
- Advertisement -

ಬೆಳ್ತಂಗಡಿ: ಮರದ ರೆಂಬೆ ಕಡಿಯುತ್ತಿದ್ದ ವೇಳೆ ವ್ಯಕ್ತಿಯೋರ್ವರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡು ಮೃತಪಟ್ಟಿರುವ ಘಟನೆ ಶಿರ್ಲಾಲು ನಲ್ಲಿ ಸಂಭವಿಸಿದೆ.


ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿವಾಸಿ ದೂಮ ನಾಯ್ಕ(65) ಮೃತಪಟ್ಟವರು. ಮನೆ ಸಮೀಪದಲ್ಲಿದ್ದ ಮರದ ರೆಂಬೆ ಕಡಿಯಲೆಂದು ದೂಮ ನಾಯ್ಕ ಅವರು ಮರಕ್ಕೆ ಹತ್ತಿ ರೆಂಬೆ ಕಡಿಯುತ್ತಿದ್ದವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.


ಗಂಭೀರವಾಗಿ ಗಾಯಗೊಂಡ ದೂಮ ನಾಯ್ಕ ಅವರನ್ನು ಮನೆ ಮಂದಿ ಹಾಗೂ ಸ್ಥಳೀಯರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಆದರೆ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!