Monday, June 8, 2026
Homeಕರಾವಳಿಉಡುಪಿವಿವಿಧ ಅಕಾಡೆಮಿಗಳಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಸದಸ್ಯರ ನೇಮಕ

ವಿವಿಧ ಅಕಾಡೆಮಿಗಳಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಸದಸ್ಯರ ನೇಮಕ

- Advertisement -
- Advertisement -

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 10 ಅಕಾಡೆಮಿಗಳ ಸದಸ್ಯರುಗಳನ್ನು ಬದಲಾವಣೆ ಮಾಡಲಾಗಿದೆ.ಹಾಲಿ ಸದಸ್ಯರನ್ನು ಕೈ ಬಿಟ್ಟು ಹೊಸ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕುಂದಾಪುರದ ಓಂ ಗಣೇಶ್ ನೇಮಕಗೊಂಡಿದ್ದಾರೆ.ನಾಟಕ ಅಕಾಡೆಮಿ ಸದಸ್ಯರಾಗಿ ಉಡುಪಿಯ ಪ್ರದೀಪಚಂದ್ರ ಕುತ್ವಾಡಿ ಅವರನ್ನು ನೇಮಕ ಮಾಡಲಾಗಿದೆ.

ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮಣಿಪಾಲದ ಅಬ್ದುಲ್ ರಹಿಮಾನ್, ಬಿ.ಸಿ. ರೋಡ್ ನ ಹೈದರಾಲಿ, ಉಪ್ಪಿನಂಗಡಿಯ ಎಂ.ಕೆ. ಮಠ ಮತ್ತು ಉಡುಪಿಯ ಮಹಮ್ಮದ್ ಮುಸ್ತಫಾ ಅವರನ್ನು ನೇಮಿಸಲಾಗಿದೆ.

ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮಂಗಳೂರಿನ ಡಾ. ಕೇಶವ ಬಂಗೇರ ನೇಮಿಸಲ್ಪಟ್ಟಿದ್ದಾರೆ. ರಂಗ ಸಮಾಜದ ಸದಸ್ಯರಾಗಿ ಬೆಳ್ತಂಗಡಿಯ ಡಾ. ಶೀನಾ ನಾಡೋಳಿ ನೇಮಕ ಮಾಡಲಾಗಿದೆ.

ಇನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಕುಂದಾಪುರದ ನಾರಾಯಣ ಖಾರ್ವಿ, ನಾಟಕ ಅಕಾಡೆಮಿ ಸದಸ್ಯರಾಗಿದ್ದ ಉಪ್ಪಿನಂಗಡಿಯ ಎಂ.ಕೆ. ಮಠ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಮಂಗಳೂರಿನ ಮುರಳಿರಾಜ್ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.

- Advertisement -

Latest News

error: Content is protected !!