Thursday, June 25, 2026
Homeಕರಾವಳಿಕಾಸರಗೋಡು; ನಿಯಂತ್ರಣ ತಪ್ಪಿ ಸ್ಕೂಟರ್ ಹೊಂಡಕ್ಕೆ ಬಿದ್ದು MBBS ವಿದ್ಯಾರ್ಥಿನಿ ಸಾವು                                                                                      

ಕಾಸರಗೋಡು; ನಿಯಂತ್ರಣ ತಪ್ಪಿ ಸ್ಕೂಟರ್ ಹೊಂಡಕ್ಕೆ ಬಿದ್ದು MBBS ವಿದ್ಯಾರ್ಥಿನಿ ಸಾವು                                                                                      

- Advertisement -
- Advertisement -

ಕಾಸರಗೋಡು: ನಿಯಂತ್ರಣ ತಪ್ಪಿ ಸ್ಕೂಟರ್ ಹೊಂಡಕ್ಕೆ ಬಿದ್ದು MBBS ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಪಿಲಿಕುಂಜೆ ಎಂಬಲ್ಲಿ ನಡೆದಿದೆ.

ಕಣ್ಣೂರು ಸೈಂಟ್ ಮೈಕಲ್ ಶಾಲಾ ಸಮೀಪದ ಮಹೇಶ್ಚಂದ್ರ ಬಾಳಿಗಾರವರ ಪುತ್ರಿ ಶಿವಾನಿ ಬಾಳಿಗಾ(20) ಮೃತ ವಿದ್ಯಾರ್ಥಿನಿ,

ಶಿವಾನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇವರು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದರು.

- Advertisement -

Latest News

error: Content is protected !!