Tuesday, November 17, 2026
Homeಕರಾವಳಿಮಂಗಳೂರುಮಂಗಳೂರು; ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಮೋಸ ಹೋದ ಯುವಕ: ₹1.22 ಲಕ್ಷ ಸೈಬರ್ ವಂಚನೆ

ಮಂಗಳೂರು; ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಮೋಸ ಹೋದ ಯುವಕ: ₹1.22 ಲಕ್ಷ ಸೈಬರ್ ವಂಚನೆ

- Advertisement -
- Advertisement -

ಮಂಗಳೂರು : ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ‘ಎಸ್ಕಾರ್ಟ್ ಸರ್ವೀಸ್’ (Escort Service) ಜಾಹೀರಾತನ್ನು ನಂಬಿ, ಹಂತ ಹಂತವಾಗಿ ₹1,22,700 ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿ 22 ವರ್ಷದ ಯುವಕನೊಬ್ಬ ಸೈಬರ್ ವಂಚಕರ ಜಾಲಕ್ಕೆ ಸಿಲುಕಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ವಂಚನೆಯ ಜಾಲ ಹೇಗಿತ್ತು? ಅಕ್ಟೋಬರ್ 25ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿ ಇನ್‌ಸ್ಟಾಗ್ರಾಮ್ ವೀಕ್ಷಿಸುತ್ತಿದ್ದ ಯುವಕನಿಗೆ, ‘ರಾಯಲ್ ಎಸ್ಕಾರ್ಟ್ ಗರ್ಲ್ಸ್ ಇನ್ ಮಂಗಳೂರು ಕಸ್ಟಮರ್ ಸರ್ವೀಸ್’ ಎಂಬ ಜಾಹೀರಾತು ಕಾಣಿಸಿಕೊಂಡಿದೆ. ಕುತೂಹಲದಿಂದ ಆ ಲಿಂಕ್ ಕ್ಲಿಕ್ ಮಾಡಿದಾಗ, ನೇರವಾಗಿ ಟೆಲಿಗ್ರಾಂ ಆ್ಯಪ್ ತೆರೆದುಕೊಂಡು ಅಪರಿಚಿತ ಖಾತೆಯೊಂದಿಗೆ ಚಾಟ್ ಆರಂಭವಾಗಿದೆ.

ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ, ಸೇವೆ ಪಡೆಯಲು ಮುಂಗಡವಾಗಿ ಹಣ ಪಾವತಿಸಿ ಬುಕ್ ಮಾಡಬೇಕು ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಯುವಕ, ವಂಚಕರು ಕಳುಹಿಸಿದ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಪೇ ಮೂಲಕ ಮೊದಲಿಗೆ ₹1,700 ವರ್ಗಾಯಿಸಿದ್ದಾರೆ.

ಮರುಪಾವತಿ ಆಮಿಷವೊಡ್ಡಿ ಲಕ್ಷಾಂತರ ರೂ. ಲೂಟಿ: ಇದಾದ ಬಳಿಕ ಮತ್ತೆ ಸಂಪರ್ಕಿಸಿದ ವಂಚಕರು ‘ಸೆಕ್ಯುರಿಟಿ ಡೆಪಾಸಿಟ್’ (ಭದ್ರತಾ ಠೇವಣಿ) ಹೆಸರಿನಲ್ಲಿ ₹19,000 ಪಾವತಿಸುವಂತೆ ಸೂಚಿಸಿದ್ದಾರೆ. ನಂತರ ಸೇವಾ ದೃಢೀಕರಣ ಶುಲ್ಕ, ಪೊಲೀಸ್ ವೆರಿಫಿಕೇಷನ್ ಶುಲ್ಕ ಹಾಗೂ ವೈಟಿಂಗ್ ಚಾರ್ಜ್ ಹೀಗೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ಕೀಳತೊಡಗಿದ್ದಾರೆ. ಪಾವತಿಸಿದ ಎಲ್ಲಾ ಹಣವನ್ನು ಸಂಪೂರ್ಣವಾಗಿ ಮರುಪಾವತಿ (Refund) ಮಾಡಲಾಗುವುದು ಎಂದು ವಂಚಕರು ನಂಬಿಸಿದ್ದರು.

ವಂಚಕರ ಮಾತನ್ನು ನಂಬಿದ ಯುವಕ ಅಕ್ಟೋಬರ್ 25ರಿಂದ ನವೆಂಬರ್ 6ರ ಅವಧಿಯಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ ಯುಪಿಐ (UPI) ಮೂಲಕ ವಿವಿಧ ಖಾತೆಗಳಿಗೆ ಒಟ್ಟು ₹1,22,700 ಹಣವನ್ನು ವರ್ಗಾಯಿಸಿದ್ದಾರೆ. ಕೊನೆಗೆ ಯಾವುದೇ ಸೇವೆಯೂ ಸಿಗದೆ, ಕಟ್ಟಿದ ಹಣವೂ ವಾಪಸ್ ಬಾರದಿದ್ದಾಗ ತಾನು ಸೈಬರ್ ವಂಚನೆಗೊಳಗಾಗಿರುವುದು ಯುವಕನ ಅರಿವಿಗೆ ಬಂದಿದೆ.ಈ ಕುರಿತು ಸಂತ್ರಸ್ತ ಯುವಕ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!