Tuesday, November 17, 2026
Homeಅಪರಾಧಮೊಟ್ಟೆ ಸಾಗಾಟದ ನೆಪದಲ್ಲಿ ಕೇರಳಕ್ಕೆ ಎತ್ತುಗಳ ಅಕ್ರಮ ಸಾಗಣೆ; ಪಂಪ್‌ವೆಲ್‌ನಲ್ಲಿ ಪೊಲೀಸರ ದಾಳಿ; 16 ಎತ್ತುಗಳ...

ಮೊಟ್ಟೆ ಸಾಗಾಟದ ನೆಪದಲ್ಲಿ ಕೇರಳಕ್ಕೆ ಎತ್ತುಗಳ ಅಕ್ರಮ ಸಾಗಣೆ; ಪಂಪ್‌ವೆಲ್‌ನಲ್ಲಿ ಪೊಲೀಸರ ದಾಳಿ; 16 ಎತ್ತುಗಳ ರಕ್ಷಣೆ, ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: ಮೊಟ್ಟೆ ಸಾಗಾಟದ ನೆಪದಲ್ಲಿ ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ 16 ಎತ್ತುಗಳನ್ನು ರಕ್ಷಿಸಲಾಗಿದ್ದು, ಲಾರಿ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂಕನಾಡಿ ನಗರ ಠಾಣೆಯ ಪೊಲೀಸರು, ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯ ಪಂಪ್‌ವೆಲ್ ಬಳಿ ಅನುಮಾನಾಸ್ಪದ ಮೊಟ್ಟೆ ಸಾಗಾಟದ ಕಂಟೇನರ್ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯ ಹಿಂಭಾಗದಲ್ಲಿ ಮೊಟ್ಟೆ ಟ್ರೇಗಳನ್ನು ಜೋಡಿಸಿ, ಒಳಭಾಗದಲ್ಲಿ 16 ಎತ್ತುಗಳನ್ನು ಅಕ್ರಮವಾಗಿ ತುಂಬಿಸಿರುವುದು ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಮಾಂಸಕ್ಕಾಗಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಾನುವಾರುಗಳು ಯಮಕನಮರಡಿ ನಿವಾಸಿ ದಸ್ತಗಿರ್ ಅವರಿಗೆ ಸೇರಿದ್ದವು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಲಾರಿ ಚಾಲಕ ರಫೀಕ್ (52) ಹಾಗೂ ರೆಹಮಾನ್ ಎಂಬವರನ್ನು ಬಂಧಿಸಲಾಗಿದೆ. ರಕ್ಷಿಸಲಾದ 16 ಎತ್ತುಗಳನ್ನು ಕೋಣಾಜೆಯ ಪಜೀರ್‌ನಲ್ಲಿರುವ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.

ಈ ಅಕ್ರಮ ಜಾನುವಾರು ಸಾಗಾಟದ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!