Tuesday, July 21, 2026
Homeಕರಾವಳಿಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಳ್ಯದ ಎಂ.ಬಿ.‌ ಸದಾಶಿವ ನೇಮಕ

ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಳ್ಯದ ಎಂ.ಬಿ.‌ ಸದಾಶಿವ ನೇಮಕ

- Advertisement -
- Advertisement -

ಬೆಂಗಳೂರು: ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಳ್ಯದ ಎಂ.ಬಿ. ಸದಾಶಿವ ನೇಮಕಗೊಂಡಿದ್ದಾರೆ.

ಎಂ.ಬಿ. ಸದಾಶಿವ ಸುಳ್ಯ ತಾಲೂಕಿನ ಹಿರಿಯ ಜೆಡಿಎಸ್ ಮುಖಂಡರಾಗಿದ್ದು, ಸುಳ್ಯದಲ್ಲಿ ಉದ್ಯಮಿಯಾಗಿದ್ದಾರೆ. ಈ ಹಿಂದೆ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿಯೂ ಎಂ.ಬಿ. ಸದಾಶಿವ ಕಾರ್ಯನಿರ್ವಹಿಸಿದ್ದರು.

ನಿನ್ನೆ ಬೆಂಗಳೂರಿ‌ನಲ್ಲಿ ಜೆಡಿಎಸ್ ಪಕ್ಷದ ಸಾಂಸ್ಥಿಕ ಚುನಾವಣೆ ನಡೆದಿದ್ದು, ಒಟ್ಟು 65 ಸದಸ್ಯರಿರುವ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ‌. ಇಬ್ರಾಹಿಂ ಅವರನ್ನು ನಿ‌‌ನ್ನೆ ಪೂರ್ಣಾವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಚುನಾವಣಾಧಿಕಾರಿಯಾಗಿ ಮಾಜಿ ಶಾಸಕ ಹೆಚ್.ಸಿ. ನೀರಾವರಿ ಕಾರ್ಯ ನಿರ್ವಹಿಸಿದ್ದರು.

- Advertisement -

Latest News

error: Content is protected !!