Sunday, May 5, 2024
Homeಕರಾವಳಿಮಂಗಳೂರು :ಅಪರೂಪದ ಕೊರಗ ಭಾಷೆಯಲ್ಲಿ ಮೂಡಿ ಬಂದ ವಿವಾಹ ಆಮಂತ್ರಣ ಪತ್ರಿಕೆ

ಮಂಗಳೂರು :ಅಪರೂಪದ ಕೊರಗ ಭಾಷೆಯಲ್ಲಿ ಮೂಡಿ ಬಂದ ವಿವಾಹ ಆಮಂತ್ರಣ ಪತ್ರಿಕೆ

spot_img
- Advertisement -
- Advertisement -

ಮಂಗಳೂರು : ನಾವೆಲ್ಲಾ ಬೇರೆ ಬೇರೆ ವಿನ್ಯಾಸದ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೋಡಿರ್ತೇವೆ. ಆದರೆ ಇಲ್ಲೊಂದು ಮದುವೆ ಕಾಗದ ಸಖತ್ ಗಮನ ಸೆಳೆಯುತ್ತಿದೆ. ಅದರ ವಿಶೇಷತೆ ಅಂದರೆ ಅದನ್ನು ಕೊರಗ ಭಾಷೆಯಲ್ಲಿ ಮುದ್ರಿಸಲಾಗಿದೆ.

ಲಿಪಿ ಕನ್ನಡವಾದರೂ ಸಂಪೂರ್ಣ ಮದುವೆಯ ಆಮಂತ್ರಣ ವಿವರ ಕೊರಗ ಭಾಷೆಯ ಶೈಲಿಯಲ್ಲಿದೆ.ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್‌ ಕುಮಾರ್‌ ಅವರ ವಿವಾಹ ನವೆಂಬರ್‌ 19ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದು, ಮದುವೆ ಕಾಗದವನ್ನು ಕೊರಗ ಭಾಷೆಯಲ್ಲಿ ಮುದ್ರಿಸಲಾಗಿದೆ.

ಕನ್ನಡಪರ ಚಿಂತಕರು ಜೊತೆಗೆ ಉಪನ್ಯಾಸಕರಾಗಿರುವ ಅರುಣ್‌ ಜೋಳದ ಕೂಡ್ಲಿಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ಅಳಿಯುತ್ತಿರುವ ಪ್ರಾದೇಶಿಕ ಭಾಷೆಯಲ್ಲಿ ಆಹ್ವಾನ ಪತ್ರಿಕೆ ನೀಡಿ ಅಪರೂಪದ ಭಾಷೆಯನ್ನು ಉಳಿಸಲು ಶ್ರಮ ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಭಾಷಾಭಿಮಾನಿಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!