Friday, June 5, 2026
Homeಕರಾವಳಿಬೆಳ್ತಂಗಡಿ; 18 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ; 18 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಬೆಳ್ತಂಗಡಿ; 18 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ನೇಪಾಳ ಮೂಲದ ಆರೋಪಿಯನ್ನು  ಬೆಳ್ತಂಗಡಿ ಪೊಲೀಸರು ತಮಿಳುನಾಡು ರಾಜ್ಯದ ಕೊಯಮತ್ತೂರುನ ಕರುಮತಾಂಪಟ್ಟಿ ಎಂಬಲ್ಲಿ ಬಂಧಿಸಿದ್ದಾರೆ.

ನೇಪಾಳ ಮೂಲದ ಧನ್ ರಾಜ್ ಖಾತಿ(46) @ ಧನ್ ಬಹಾದ್ದೂರ್ ಖಾತಿ @ ಉತ್ತಮ್ ಖಾತಿ  ಬಂಧಿತ ಆರೋಪಿ.

ಬೆಳ್ತಂಗಡಿ  ಪೊಲೀಸ್ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ, ಉಪ ನಿರೀಕ್ಷಕರಾದ ಧನರಾಜ್  ಟಿ ಎಮ್ ಹಾಗು ಚಂದ್ರಶೇಖರ್ ಅವರ ಮಾರ್ಗದರ್ಶನದಲ್ ಬೆಳ್ತಂಗಡಿ ಪೊಲೀಸ್ ವೃಷಭ್ ಹಾಗೂ ಬಸವರಾಜ್ ಎಸ್ ಪಿ  ರವರು  ಖಚಿತ ಮಾಹಿತಿಯಂತೆ ಆರೋಪಿಯನ್ನು ತಮಿಳುನಾಡು ರಾಜ್ಯದ ಕೊಯಮತ್ತೂರುನ ಕರುಮತಾಂಪಟ್ಟಿ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!