Thursday, June 4, 2026
Homeಉದ್ಯಮಮರ್ದಾಳ, ಸುಂಕದಕಟ್ಟೆ ಹಸಿ ಮೀನು ಸ್ಟಾಲ್ ಏಲಂ ಪ್ರಕ್ರಿಯೆ; ಭಾರೀ ಮೊತ್ತಕ್ಕೆ ಏಲಂ

ಮರ್ದಾಳ, ಸುಂಕದಕಟ್ಟೆ ಹಸಿ ಮೀನು ಸ್ಟಾಲ್ ಏಲಂ ಪ್ರಕ್ರಿಯೆ; ಭಾರೀ ಮೊತ್ತಕ್ಕೆ ಏಲಂ

- Advertisement -
- Advertisement -

ಕಡಬ: ಇಲ್ಲಿನ ಐತ್ತೂರು ಗ್ರಾ.ಪಂ ವ್ಯಾಪ್ತಿಯ ಮರ್ದಾಳ ಹಾಗೂ ಸುಂಕದಕಟ್ಟೆಯ ಹಸಿ ಮೀನು ಸ್ಟಾಲ್ ಏಲಂ ಪ್ರಕ್ರಿಯೆಯು ನ.28 ಗುರುವಾರದಂದು ಗ್ರಾ.ಪಂ ಸಭಾಂಗಣದಲ್ಲಿ ನಡೆದಿದ್ದು, ಸ್ಟಾಲ್ ಗಳು ಬರೋಬ್ಬರಿ ರೂ. 4,10,000 ಕ್ಕೆ ಏಲಂ ಆಗಿದೆ.

ಬರೋಬ್ಬರಿ ರೂ. 4,10,000 ಕ್ಕೆ ಏಲಂ ಆಗಿರುವ ಮರ್ದಾಳ ಹಸಿಮೀನು ಸ್ಟಾಲ್ ಕಳೆದ ವರ್ಷ ರೂ.15,500ಕ್ಕೆ ಏಲಂ ಆಗಿತ್ತು. ಈ ಸ್ಟಾಲ್ ಅನ್ನು ಅಬೂಬಕ್ಕರ್ ಎಂಬವರು ಏಲಂ ಮೂಲಕ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸುಂಕದಕಟ್ಟೆ ಹಸಿಮೀನು ಸ್ಟಾಲ್ ಈ ಬಾರಿ ರೂ.1,10,000ಕ್ಕೆ ಏಲಂ ಆಗಿದ್ದು, ಕಳೆದ ವರ್ಷ ರೂ.15,500ಕ್ಕೆ ಏಲಂ ಆಗಿತ್ತು. ಈ ಸ್ಟಾಲ್ ಅನ್ನು ಅದ್ರಾಮ ಎಂಬವರು ಏಲಂ ಮೂಲಕ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪಿಡಿಓ ಸುಜಾತ ಕೆ ಅವರು ಏಲಂ ಸಂಬಂಧಿತ ವಿಚಾರವನ್ನು ಏಲಂ ಪ್ರಕ್ರಿಯೆನ್ನು ನಡೆಸಿದ್ದು, ಏಲಂ ನಲ್ಲಿ ಸರ್ಪುದ್ದೀನ್, ಅಬೂಬಕ್ಕರ್, ಅದ್ರಾಮ, ಮೋಹನ್, ಅಶ್ರಫ್, ಹಾರಿಸ್, ವಿನಯ, ರಘುರಾಜ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವತ್ಸಲಾ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ಮನಮೋಹನ್ ಗೋಳ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಶಿಬು ಸಹಕರಿಸಿದರು.

- Advertisement -

Latest News

error: Content is protected !!