Thursday, April 17, 2025
Homeಕರಾವಳಿಮಂಗಳೂರುಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ಮನೋಹರ ಕುಮಾರ್ ನಿಯುಕ್ತ

ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ಮನೋಹರ ಕುಮಾರ್ ನಿಯುಕ್ತ

spot_img
- Advertisement -
- Advertisement -

ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ನಿಯುಕ್ತರಾಗಿದ್ದ ಮನೋಹರ ಕುಮಾರ್, ಎ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ ಮತ್ತು ಹೆಚ್ಚವರಿ ಸಿವಿಲ್  ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಹೆಚ್ಚುವರಿ ಹೊಣೆ ವಹಿಸಿಕೊಳ್ಳುವಂತೆ ಸರಕಾರ ಅದೇಶಿಸಿರುತ್ತದೆ.

ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಯು. ಟಿ ಖಾದರ್ ರವರ ಸೂಚನೆ ಮೇರೆಗೆ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ (ಆಡಳಿತ -2)  ಅದೀನ ಕಾರ್ಯದರ್ಶಿಗಳಾದ ಆದಿನಾರಾಯಣ ರವರು  ಈ ಆದೇಶ ನೀಡಿರುತ್ತಾರೆ.

ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರ ಶಿಫಾರಸ್ಸಿನ ಮೇರೆಗೆ ಈ ಹೆಚ್ಚುವರಿ ಹೊಣೆ ವಹಿಸುವಂತೆ ವಿಧಾನ ಸಭಾಧ್ಯಕ್ಷರು ಸೂಚನೆ ನೀಡಿದ್ದರು.

- Advertisement -
spot_img

Latest News

error: Content is protected !!