Sunday, June 7, 2026
Homeಕರಾವಳಿಪ್ರವೀಣ್ ಹತ್ಯೆ ಹಿನ್ನಲೆ: ಕೊಡಿಪ್ಪಾಡಿ ಬಿಜೆಪಿ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮನ್ಮಥ ಶೆಟ್ಟಿ

ಪ್ರವೀಣ್ ಹತ್ಯೆ ಹಿನ್ನಲೆ: ಕೊಡಿಪ್ಪಾಡಿ ಬಿಜೆಪಿ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮನ್ಮಥ ಶೆಟ್ಟಿ

- Advertisement -
- Advertisement -

ಪುತ್ತೂರು: ಪ್ರವೀಣ್ ಹತ್ಯೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶಿತರಾಗಿ ಪಕ್ಷದ ಜವಾಬ್ದಾರಿ ಹೊಂದಿರುವ ಹಲವಾರು ಪ್ರಮುಖರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಪ್ರಸ್ತುತ ಕೊಡಿಪ್ಪಾಡಿಯ 72ನೇ ಬೂತ್ ಅಧ್ಯಕ್ಷ ಮನ್ಮಥ ಶೆಟ್ಟಿ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮನ್ಮಥ ಶೆಟ್ಟಿಯವರು ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದು, ಕಳೆದ ವಿಧಾನಸಭಾ, ಲೋಕಸಭಾ, ಗ್ರಾ.ಪಂ
ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದು, ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಪಕ್ಷವನ್ನು
ಗೆಲ್ಲಿಸುವಲ್ಲಿ ಶ್ರಮ ಪಟ್ಟಿರುತ್ತಾರೆ. ಇನ್ನು ಹಿಂದುತ್ವವೇ ದೇಯ ವಾಕ್ಯ ಎಂಬ ನಿಟ್ಟಿನಲ್ಲಿ ಮತಯಾಚಿಸಿ ಪ್ರಸ್ತುತ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಸಾವಿಗೆ ನ್ಯಾಯ ದೊರಕಿಸದ ಕೇವಲ ಭರವಸೆ ನೀಡುತ್ತಿರುವ ಹಿನ್ನೆಲೆ ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

- Advertisement -

Latest News

error: Content is protected !!