Friday, May 3, 2024
Homeಕರಾವಳಿಉಡುಪಿಸೆಪ್ಟೆಂಬರ್ ಎರಡನೇ ವಾರದಲ್ಲಿ ಮಣಿಪಾಲ್ ವಿವಿಯಲ್ಲಿ ತರಗತಿಗಳು ಆರಂಭ

ಸೆಪ್ಟೆಂಬರ್ ಎರಡನೇ ವಾರದಲ್ಲಿ ಮಣಿಪಾಲ್ ವಿವಿಯಲ್ಲಿ ತರಗತಿಗಳು ಆರಂಭ

spot_img
- Advertisement -
- Advertisement -

ಮಣಿಪಾಲ: ಮಣಿಪಾಲ‌ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ ಎರಡನೇ ವಾರದಿಂದ ತರಗತಿಗಳು ಶುರುವಾಗಲಿವೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿ ನಿಯಮದಂತೆ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಒಂದು ವಾರದ ಕ್ವಾರಂಟೈನ್ ಬಳಿಕ ತರಗತಿಗೆ ತೆರಳಲು ಅನುಮತಿ ದೊರೆಯಲಿದೆ.

ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯ ಮಾಡಲಾಗಿದ್ದು, ಒಂದು ವೇಳೆ ಲಸಿಕೆ ಪಡೆಯದಿದ್ದಲ್ಲಿ ವಿಶ್ವವಿದ್ಯಾಲಯದಿಂದ‌ ಉಚಿತವಾಗಿ ದೊರೆಯಲಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರದೊಂದಿಗೆ ತರಗತಿ ನಡೆಸಲು ವಿವಿ ನಿರ್ಧಾರ ಮಾಡಿದ್ದು, ಹೊರ ರಾಜ್ಯಕ್ಕೆ ತೆರಳುವ ಮೊದಲು ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಮಾಡಲಾಗುತ್ತದೆ.

ಇದಲ್ಲದೇ ಹೊರ‌ ರಾಜ್ಯದಿಂದ ಕಾಲೇಜಿಗೆ ಆಗಮಿಸುವಾಗಲೂ ಸ್ಕ್ರೀನಿಂಗ್ ಕಡ್ಡಾಯವಾಗಿರುತ್ತದೆ. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಮುಂದುವರಿಯಲಿವೆ. ಮಣಿಪಾಲ ಹೈಯರ್ ಎಜ್ಯುಕೇಶನ್ ಹಾಗೂ ಟ್ಯಾಪ್ಮಿಯಲ್ಲಿ ಕೋವಿಡ್ ನಿಯಮದಂತೆ ತರಗತಿ ಆರಂಭವಾಗಲಿವೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಎಂಐಟಿ ಕ್ಯಾಂಪಸ್ ‌ನಲ್ಲಿ ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದ್ದ‌ ಕಾರಣ, ಎಂಐಟಿ ಕ್ಯಾಂಪಸ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಮಾಡಲಾಗಿತ್ತು.

ಕಾಲೇಜಿನ ಇಪ್ಪತ್ತಮೂರು ಹಾಸ್ಟೆಲ್ ಸೇರಿದಂತೆ ಇಡೀ ಕ್ಯಾಂಪಸ್ ಅನ್ನು ಕಂಟೈನ್ ಮೆಂಟ್ ಝೋನ್ ಮಾಡುವ ಮೂಲಕ ಕೋವಿಡ್ ನಿಯಂತ್ರಣ ಮಾಡಲಾಗಿತ್ತು.

- Advertisement -
spot_img

Latest News

error: Content is protected !!