Monday, June 8, 2026
Homeಕರಾವಳಿಉಡುಪಿಆನ್ ಲೈನ್ ವಂಚನೆ: 2.36 ಲಕ್ಷ ರೂಪಾಯಿ ಕಳೆದುಕೊಂಡ ಕಾರ್ಕಳದ ಯುವಕ!

ಆನ್ ಲೈನ್ ವಂಚನೆ: 2.36 ಲಕ್ಷ ರೂಪಾಯಿ ಕಳೆದುಕೊಂಡ ಕಾರ್ಕಳದ ಯುವಕ!

- Advertisement -
- Advertisement -

ಕಾರ್ಕಳ: ಆನ್‌ಲೈನ್‌ ಮೂಲಕ ಗೂಗಲ್‌ ಆಯಪ್‌ನಲ್ಲಿ ಸಾಲ ಪಡೆಯಲು ಯತ್ನಿಸಿ ಯುವಕನೋರ್ವ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ.

ಕಾರ್ಕಳದ ಮುಂಡ್ಕೂರಿನ ಸಿರಾಜ್ (26) ಹಣ ಕಳೆದುಕೊಂಡ ವ್ಯಕ್ತಿ. ಆನ್ ಲೈನ್ ನಲ್ಲಿ ಸಾಲ ಪಡೆಯುವ ಬಗ್ಗೆ ಗೂಗಲ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು ಅಪ್ಲೋಡ್ ಮಾಡಿದ್ದರು.

ಮೂರು ದಿನಗಳ ನಂತರ (+918343839550) ಅಪರಿಚಿತ ನಂಬರ್ ನಿಂದ ಯುವಕನಿಗೆ ಕರೆ ಬಂದಿದ್ದು ಮುದ್ರಾ ಲೋನ್ ನಿಂದ ಕರೆ ಮಾಡುತ್ತಿರುವುದಾಗಿ ಆ ವ್ಯಕ್ತಿ ಹೇಳಿದ್ದಾನೆ. ಟ್ಯಾಕ್ಸ್ ಕಟ್ಟುವಂತೆ ಯುವಕನಿಗೆ ಹೇಳಿ ಹಂತ ಹಂತವಾಗಿ 1,97,400 ಲಕ್ಷ ರೂ. ಹಣ ಖಾತೆಗೆ ವರ್ಗಾವಣೆಗೊಳಿಸಿಕೊಂಡಿದ್ದ.

ಸ್ವಲ್ಪ ದಿನಗಳ ಬಳಿಕ ಮತ್ತೋರ್ವ ಅಪರಿಚಿತ ವ್ಯಕ್ತಿ ಕರೆಮಾಡಿ ಲೋನ್ ಕೊಡಿಸುವುದಾಗಿ ಹಾಗೂ ಕಳೆದುಕೊಂಡ ಹಣ ವಾಪಾಸ್ ದೊರಕಿಸಿಕೊಡುವುದಾಗಿ ಹೇಳಿ 39,300 ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ. ಆನಂತರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ಕರೆ ಮಾಡಿದವರು ಸಾಲವನ್ನು ನೀಡದೆ ಹಣವನ್ನು ವಾಪಾಸ್ ನೀಡದೆ ಮೋಸ ಮಾಡಿದ್ದು ಈ ಘಟನೆಯಲ್ಲಿ ಒಟ್ಟಾರೆ 2.36 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!