Sunday, October 11, 2026
Homeಕರಾವಳಿಮಂಗಳೂರುಮಾಣಿ; ಶಂಭುಗದಲ್ಲಿ ದೈವಗಳ ನವರಾತ್ರಿ ನೇಮದ ಹಿನ್ನೆಲೆ ಗೊನೆ ಮುಹೂರ್ತ

ಮಾಣಿ; ಶಂಭುಗದಲ್ಲಿ ದೈವಗಳ ನವರಾತ್ರಿ ನೇಮದ ಹಿನ್ನೆಲೆ ಗೊನೆ ಮುಹೂರ್ತ

- Advertisement -
- Advertisement -

ಮಾಣಿ ಗ್ರಾಮದ ಶಂಭುಗದಲ್ಲಿ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ ಹಾಗೂ ಮಲೆಕೊರತಿ ದೈವಗಳ ನವರಾತ್ರಿ ನೇಮವು ಅಕ್ಟೋಬರ್ 18ರ ಆದಿತ್ಯವಾರ ರಾತ್ರಿ ಶಂಭುಗ ಬಾಲಮಂಟಪದಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಭಾನುವಾರ ನಡೆಯಿತು.

ಗ್ರಾಮದ ತಂತ್ರಿಗಳಾದ ಪಳನೀರು ಅನಂತ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ಮಾಣಿಗುತ್ತು ಸಚಿನ್ ರೈ, ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ (ರತ್ನಾಕರ ಭಂಡಾರಿ), ಮಜಿ ತಿರುಮಲಕುಮಾರ್, ಶಂಭುಗ ಸದಾಶಿವ ಶೆಟ್ಟಿ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Latest News

error: Content is protected !!