Sunday, October 11, 2026
Homeಕರಾವಳಿಮಂಗಳೂರುಕೊಚ್ಚಿಯಲ್ಲಿ ಭೀಕರ ಅಪಘಾತ: ಸುಳ್ಯ ಮೂಲದ ಯುವಕ ಸಾವು

ಕೊಚ್ಚಿಯಲ್ಲಿ ಭೀಕರ ಅಪಘಾತ: ಸುಳ್ಯ ಮೂಲದ ಯುವಕ ಸಾವು

- Advertisement -
- Advertisement -

ಸುಳ್ಯ: ಕೇರಳದ ಕೊಚ್ಚಿನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯ ತಾಲೂಕಿನ ಕನಕಮಜಲು ಮೂಲದ ಯುವಕರೊಬ್ಬರು ಮೃತಪಟ್ಟಿದ್ದಾರೆ. ಕನಕಮಜಲು ಗ್ರಾಮದ ಪೆಲ್ತಡ್ಕ ನಿವಾಸಿ ಇಬ್ರಾಹಿಂ ಪಿ.ಎ. ಎಂಬವರ ಪುತ್ರ ಇಯಾಸ್ ಮೃತಪಟ್ಟ ಯುವಕ.

ಇಯಾಸ್ ಅವರು ನಿನ್ನೆ ರಾತ್ರಿ ತಮ್ಮ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!