Friday, June 5, 2026
Homeಕರಾವಳಿಕುಲಪತಿ ಹುದ್ದೆ ಪಡೆಯಲು ಹಣ ಕೊಟ್ಟಿದ್ದ ಪ್ರಕರಣ: ಮಂಗಳೂರು ವಿವಿ ಪ್ರಾಧ್ಯಾಪಕ ಜೈಶಂಕರ್ ಸಸ್ಪೆಂಡ್

ಕುಲಪತಿ ಹುದ್ದೆ ಪಡೆಯಲು ಹಣ ಕೊಟ್ಟಿದ್ದ ಪ್ರಕರಣ: ಮಂಗಳೂರು ವಿವಿ ಪ್ರಾಧ್ಯಾಪಕ ಜೈಶಂಕರ್ ಸಸ್ಪೆಂಡ್

- Advertisement -
- Advertisement -

ಮಂಗಳೂರು: ಕುಲಪತಿ ಹುದ್ದೆ ಪಡೆಯುವ ಉದ್ದೇಶದಿಂದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರಿಗೆ 17.50 ಲಕ್ಷ ರೂಪಾಯಿ ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೈಶಂಕರ್ ಅವರನ್ನು ಅಮಾನತು ಮಾಡಲಾಗಿದೆ.

ಸೂಕ್ಷ್ಮಣು ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ. ಜೈಶಂಕರ್ ಅವರು ಕುಲಪತಿ ಹುದ್ದೆ ಪಡೆಯಲು ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರಿಗೆ ಹಣ ನೀಡಿದ್ದರು.

ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಜೈಶಂಕರ್ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಕರಣದ ಬಗ್ಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!