Saturday, May 4, 2024
Homeಕರಾವಳಿಮಂಗಳೂರಿನಲ್ಲೊಬ್ಬ ಕಾಮುಕ ಅಪ್ಪ: ಮಗಳ ಮೇಲೆ ನಿರಂತರ ಅತ್ಯಾಚಾರಗೈದ ತಂದೆಯ ಬಂಧನ

ಮಂಗಳೂರಿನಲ್ಲೊಬ್ಬ ಕಾಮುಕ ಅಪ್ಪ: ಮಗಳ ಮೇಲೆ ನಿರಂತರ ಅತ್ಯಾಚಾರಗೈದ ತಂದೆಯ ಬಂಧನ

spot_img
- Advertisement -
- Advertisement -

ಮಂಗಳೂರು: ಅಪ್ಪನೇ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಂಗಳೂರಿನಲ್ಲಿ  ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ. ಈತ ತನ್ನ ಮಗಳು 5ನೇ ತರಗತಿಯಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಪ್ರಸ್ತುತ ಆಕೆ 10ನೇ ತರಗತಿ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದಾಗ ಪುತ್ರಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ.

ಇದರಿಂದಾಗಿ ಆಕೆ ದೈಹಿಕ ಮತ್ತು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾಳೆ. ಅತ್ಯಾಚಾರ ಸಮಯದಲ್ಲಿ ಆಕೆಗೆ ತಿಳಿವಳಿಕೆ ಇಲ್ಲದ ಕಾರಣ ವಿಳಂಬವಾಗಿ ದೂರು ನೀಡಲಾಗಿದೆ. ಆ ಬಳಿಕವೂ ಆಗಾಗ ಅತ್ಯಾಚಾರ ಮಾಡುತ್ತಿದ್ದು, ಅದನ್ನು ಹೇಳಿಕೊಳ್ಳಲಾಗದೆ ಮಾನಸಿಕವಾಗಿ ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!