Thursday, June 4, 2026
Homeಕರಾವಳಿಮಂಗಳೂರು ಕಳ್ಳನನ್ನು ಚೇಸ್ ಮಾಡಿ ಹಿಡಿದ ಪೊಲೀಸ್, ಪತ್ರಕರ್ತರ‌ ಸಂಘದಿಂದ ವೀಡಿಯೋ ಮಾಡಿದ ಪತ್ರಕರ್ತ...

ಮಂಗಳೂರು ಕಳ್ಳನನ್ನು ಚೇಸ್ ಮಾಡಿ ಹಿಡಿದ ಪೊಲೀಸ್, ಪತ್ರಕರ್ತರ‌ ಸಂಘದಿಂದ ವೀಡಿಯೋ ಮಾಡಿದ ಪತ್ರಕರ್ತ ಪ್ರಥ್ವಿರಾಜ್‌ಗೆ ಸನ್ಮಾನ

- Advertisement -
- Advertisement -

ಮಂಗಳೂರು: ನಗರದಲ್ಲಿ ಕಳ್ಳನನ್ನು ಬೆನ್ನಟ್ಟಿ ಹಿಡಿದ ಪೊಲೀಸ್ ಅಧಿಕಾರಿಯೊಬ್ಬರ ಕರ್ತವ್ಯ ಪ್ರಜ್ಞೆಯ ಕುರಿತಂತೆ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಮಾಡಿರುವ ಮಂಗಳೂರು ಜಿಲ್ಲಾ ಟವಿ9 ವರದಿಗಾರ ಪ್ರಥ್ವಿರಾಜ್ ಅವರನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಅಭಿನಂದಿಸಲಾಯಿತು.

ಅಭಿನಂದನೆಯನ್ನು ದ.ಕ. ಜಿಲ್ಲಾ ವಾರ್ತಾಧಿಕಾರಿ ರವಿರಾಜ್‌ರವರು ನೆರವೇರಿಸಿದರು. ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ತಾನು ಮಂಗಳೂರಿನ ಪತ್ರಕರ್ತರ ಕ್ರಿಯಾಶೀಲತೆ, ಚುರುಕುತನವನ್ನು ಎಲ್ಲೂ ಕಂಡಿಲ್ಲ ಎಂದು ವಾರ್ತಾಧಿಕಾರಿ ರವಿರಾಜ್ ಈ ಸಂದರ್ಭ ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಥ್ವಿರಾಜ್, ಪ್ರತಿಯೊಬ್ಬ ಪತ್ರಕರ್ತ ಪ್ರತಿನಿತ್ಯ ಇಂತಹ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ತನ್ನ ಈ ಕಾರ್ಯ ಗುರುತಿಸಲ್ಪಟ್ಟಿರುವುದು ಸಂತಸ ತಂದಿದೆ ಎಂದು ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.

- Advertisement -

Latest News

error: Content is protected !!