Monday, June 8, 2026
Homeಕರಾವಳಿಮಂಗಳೂರುತುಳುವಿನಲ್ಲೇ ಟ್ವೀಟ್ ಮಾಡಿ ಮಂಗಳೂರಿನ ಜನತೆಗೆ ಧನ್ಯವಾದ ಅರ್ಪಿಸಿದ ಮಂಗಳೂರಿನ ನಿಕಟ ಪೂರ್ವ ಕಮೀಷನರ್

ತುಳುವಿನಲ್ಲೇ ಟ್ವೀಟ್ ಮಾಡಿ ಮಂಗಳೂರಿನ ಜನತೆಗೆ ಧನ್ಯವಾದ ಅರ್ಪಿಸಿದ ಮಂಗಳೂರಿನ ನಿಕಟ ಪೂರ್ವ ಕಮೀಷನರ್

- Advertisement -
- Advertisement -

ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಳೆದ 11 ತಿಂಗಳಿಂದ ಸೇವೆ ಸಲ್ಲಿಸಿದ್ದ ಡಾ. ಪಿ.ಎಸ್ ಹರ್ಷವರು ಇದೀಗ ವಾರ್ತಾ ಇಲಾಖಾ ಕಮೀಷನರ್ ಆಗಿ ನೇಮಕವಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಇಷ್ಟು ದಿನ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟ ಮಂಗಳೂರಿನ ಜನತೆಗೆ ಅವರು ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

 “ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ್ ಇತ್ತೆ ವರ್ಗಾವಣೆ ಅವೋಂದುಂಡು. ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್ ದಿಂಜಿನ‌ ಸೊಲ್ಮೆಲು” (ಮಂಗಳೂರಿನ ಎಲ್ಲಾ ಪ್ರೀತಿಯ ಬಂಧುಗಳೇ, ಹನ್ನೊಂದು ತಿಂಗಳಿನಿಂದ ಮಂಗಳೂರಿನ ಪೊಲೀಸ್ ಆಯುಕ್ತನಾಗಿ ಸೇವೆ ನಡೆಸಿದ ನನಗೆ ಈಗ ವರ್ಗಾವಣೆ ಆಗಿದೆ. ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಪ್ರಾಮಾಣಿಕ ಮತ್ತು ಜನಪರವಾಗಿ ನನ್ನ ಕರ್ತವ್ಯ ಮಾಡಿಕೊಂಡು ಬಂದಿದ್ದೇನೆ. ನನಗೆ ಸಹಕಾರ, ಬೆಂಬಲ ಕೊಟ್ಟ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು) ಎಂದು ಟ್ವೀಟ್ ಮಾಡಿದ್ದಾರೆ. ಹರ್ಷ ಅವರ ವರ್ಗಾವಣೆಯ ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಆಗಿ ವಿಕಾಶ್ ಕುಮಾರ್ ನೇಮಕವಾಗಿದ್ದಾರೆ

- Advertisement -

Latest News

error: Content is protected !!