Saturday, May 18, 2024
Homeಕರಾವಳಿಮಂಗಳೂರು ಎಇಇ ಮನೆಗೆ ಎಸಿಬಿ ದಾಳಿ ಮುಕ್ತಾಯ : ದಾಳಿಯ ಇಂಚಿಂಚು ಮಾಹಿತಿ ಇಲ್ಲಿದೆ

ಮಂಗಳೂರು ಎಇಇ ಮನೆಗೆ ಎಸಿಬಿ ದಾಳಿ ಮುಕ್ತಾಯ : ದಾಳಿಯ ಇಂಚಿಂಚು ಮಾಹಿತಿ ಇಲ್ಲಿದೆ

spot_img
- Advertisement -
- Advertisement -

ಮಂಗಳೂರು : ಇಂದು ರಾಜ್ಯದ ಹಲವೆಡೆ ಎಸಿಬಿ ಅಧಿಕಾರಿಗಳು 18 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗೆ ದಾಳಿ ಮಾಡಿದ್ದು ಅಕ್ರಮ ಅಸ್ತಿ ,ಹಣ ಪತ್ತೆಯಾಗಿದೆ. ಅದರಲ್ಲೂ ಮಂಗಳೂರು ಕೆಪಿಟಿಸಿಎಲ್ ನ ಎಇಇ ದಯಾಳ್ ಸುಂದರ್ ರಾಜ್ ಅವರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ವಿಜಯ ಅಪಾರ್ಟ್‌ಮೆಂಟ್ ನಲ್ಲಿ ಬಾಡಿಗೆ ಪಡೆದ‌102 ನಂಬರ್ ನ ಪ್ಲ್ಯಾಟ್, ಕದ್ರಕಂಬ್ಲದಲ್ಲಿರುವ ಸ್ವಂತ ಮಾಲೀಕತ್ವದ ಆರೂಂ ಅಪಾರ್ಟ್‌ಮೆಂಟ್ ನಲ್ಲಿರುವ ಪ್ಲ್ಯಾಟ್ , ಮೆಸ್ಕಾಂ ಕಛೇರಿ ,ಮೈಸೂರಿನಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ 5 ಗಂಟೆಗೆ ಏಕಕಾಲದಲ್ಲಿ ಮಂಗಳೂರು ಹಾಗೂ ಕಾರವಾರ ಎಸಿಬಿ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ. ಸಂಜೆ 5 ಗಂಟೆ ವೇಳೆಗೆ ಎಲ್ಲಾ ಕಡೆ ದಾಖಲೆಗಳನ್ನು ಪರಿಶೀಲನೆ ಮಾಡಿ ಮಹಜರು ಮಾಡಿದ ನಂತರ ಎಸಿಬಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಎಸಿಬಿ ದಾಳಿ ವೇಳೆ ಪತ್ತೆಯಾದ ಅಕ್ರಮ ಆಸ್ತಿಯ ವಿವರಗಳು:

1) 380 ಗ್ರಾಂ ಚಿನ್ನ , 3.5 ಕೆ.ಜಿ. ಬೆಳ್ಳಿ , 25,000/- ಹಣ, ಒಂದು ಪ್ಲ್ಯಾಟ್, ಮೈಸೂರಲ್ಲಿ ನಾಲ್ಕು ಸೈಟ್ , ಒಂದು ಹುಂಡೈ ಕಾರು, ಎರಡು ಬೈಕ್ ಪತ್ತೆಯಾಗಿದ್ದು ಅದನ್ನು ಮಹಜರು ನಡೆಸಿ ನೋಟಿಸ್ ನೀಡಿ ಎಸಿಬಿ ಅಧಿಕಾರಿಗಳು ತೆರಳಿದ್ದಾರೆ.

ಮಂಗಳೂರು ಎಸಿಬಿ ಎಸ್ಪಿ.ಸಿ.ಎ.ಸೈಮನ್, ಡಿವೈಎಸ್ಪಿ ಕೆ.ಸಿ.ಪ್ರಕಾಶ್, ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಹರಿಪ್ರಸಾದ್ , ರಾಮಕೃಷ್ಣ. ಡಿ.ಎ,ಉಮೇಶ್,ಗಂಗಣ್ಣ, ಭರತ್ ರಾಜ್, ಸಂದೇಶ್, ರಾಕೇಶ್, ಮೋಹನ್ ಹಾಗೂ ಕಾರವಾರ ಎಸಿಬಿ ಇನ್ಸ್ಪೆಕ್ಟರ್ ರಾಕೇಶ್ ಹಾಗೂ ನಾಲ್ಕು ಜನರ ತಂಡ ಮತ್ತು ಮೈಸೂರು ಮನೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಇನ್ಸ್ಪೆಕ್ಟರ್ ಗುರುರಾಜ್, ರಾಧಾಕೃಷ್ಣ .ಕೆ, ಆದರ್ಶ್, ಮಂಜುನಾಥ್ ಕಾರ್ಯಾಚರಣೆ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!