Thursday, June 4, 2026
HomeUncategorizedಮಂಗಳೂರು: ರಸ್ತೆಗೆ ತ್ಯಾಜ್ಯ ಎಸೆದ ಮಹಿಳೆಗೆ ದಂಡ

ಮಂಗಳೂರು: ರಸ್ತೆಗೆ ತ್ಯಾಜ್ಯ ಎಸೆದ ಮಹಿಳೆಗೆ ದಂಡ

- Advertisement -
- Advertisement -

ಮಂಗಳೂರು:  ನಗರದ ಹೊರವಲಯದ ಪಡುಪೆರಾರ ಗ್ರಾಪಂ ಅಧ್ಯಕ್ಷೆ ಅಮಿತಾ ಎಂ.ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪಮೂಲ್ಯರ ನೇತೃತ್ವದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮ್ಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್ನೆಸ್ಸೆಸ್) ಸುಮಾರು ಐವತ್ತು ಮಂದಿ ವಿದ್ಯಾರ್ಥಿಗಳು ಗ್ರಾಪಂ ವ್ಯಾಪ್ತಿಯ ಕತ್ತಲ್ವಾರ್ ಪಡೀಲ್ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.


ಈ ಸಂದರ್ಭ ತ್ಯಾಜ್ಯ ತುಂಬಿದ್ದ ಪ್ಲಾಸ್ಟಿಕ್ ಬಕೆಟ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮಹಿಳೆ ರಸ್ತೆಗೆ ತ್ಯಾಜ್ಯ ಸುರಿದರು. ತಕ್ಷಣ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಪಿಡಿಒ ಉಗ್ಗಪ್ಪ ಮೂಲ್ಯ, ಸ್ಥಳದಲ್ಲೇ ಆಕೆಗೆ 2,000 ರೂಪಾಯಿ ದಂಡ ವಿಧಿಸಿ ಕಸ ಹೆಕ್ಕಿಸಿದರು.

ಮೂರು ತಿಂಗಳ ಹಿಂದಷ್ಟೇ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ೧ ಸಾವಿರ ರೂಪಾಯಿ ದಂಡ ವಿಧಿಸಿದ್ದ ಪಿಡಿಒ ಇದೀಗ ಎರಡನೇ ಬಾರಿ ದಂಡ ವಿಧಿಸಿದ್ದಾರೆ.

- Advertisement -

Latest News

error: Content is protected !!