- Advertisement -
- Advertisement -
ಮಂಗಳೂರು: ನಗರದ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದಕ್ಕೆ ಸೆಪ್ಟೆಂಬರ್ 28ರಂದು ಹಾಡುಹಗಲೇ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
‘ಸಹಯೋಗ್ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್’ನ ಫ್ಲ್ಯಾಟ್ ನಂಬರ್ 202ರ ನಿವಾಸಿ ವರ್ಷಾಬೆನ್ ಎಂಬವರು ಮಧ್ಯಾಹ್ನ 3:00 ಗಂಟೆಗೆ ಮನೆಗೆ ಬೀಗ ಹಾಕಿ ಟೈಲರ್ ಅಂಗಡಿಗೆ ತೆರಳಿದ್ದರು. ಸಂಜೆ 5:10ಕ್ಕೆ ವಾಪಸ್ ಬಂದಾಗ ಮುಖ್ಯ ಬಾಗಿಲಿನ ಬೀಗ ಒಡೆದು ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 181 ಗ್ರಾಂ ಚಿನ್ನಾಭರಣ (ಮೌಲ್ಯ ₹ 14,50,000/-), ₹ 42,000/- ನಗದು, 3 ಬ್ರ್ಯಾಂಡೆಡ್ ಕೈಗಡಿಯಾರಗಳು ಹಾಗೂ ಸೂಟ್‌ಕೇಸ್ ಸೇರಿ ಒಟ್ಟು ₹ 15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -


