Sunday, May 5, 2024
Homeಕರಾವಳಿಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಭಟ್ಕಳಕ್ಕೆ ಹರಡಿದ ಕೊರೋನ

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಭಟ್ಕಳಕ್ಕೆ ಹರಡಿದ ಕೊರೋನ

spot_img
- Advertisement -
- Advertisement -

ಭಟ್ಕಳ, ಮೇ 8: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಭಟ್ಕಳದಲ್ಲಿ 12 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ.

ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಭಟ್ಕಳದ 18 ವರ್ಷದ ಯುವತಿಯೊಬ್ಬಳಲ್ಲಿ ಕೊರೋನ ಸೋಂಕು ಇದೀಗ 12 ಮಂದಿಗೆ ಹರಡಿರುವುದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. 18 ವರ್ಷದ ಈ ಯುವತಿಯಲ್ಲಿ ಮೇ 5ರಂದು ಕೊರೋನ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಯುವತಿಯ ಸಂಪರ್ಕಕ್ಕೆ ಬಂದಿರುವ ಆಕೆಯ ಅಕ್ಕ, ಅಕ್ಕನ ಹೆಣ್ಣುಮಗು, ಅಜ್ಜ, ಅಜ್ಜಿ, ಚಿಕ್ಕಮ್ಮ, ಇಬ್ಬರು ಗೆಳತಿಯರು ಸೇರಿದಂತೆ ಒಟ್ಟು ಇಬ್ಬರು ಪುರುಷರು, ಒಂಬತ್ತು ಮಹಿಳೆಯರಿಗೆ ಸೋಂಕು ತಗುಲಿರುವುದು ಗಂಟಲದ್ರವದ ಪರೀಕ್ಷೆಯಿಂದ ದೃಢಗೊಂಡಿದೆ. ಇವರಲ್ಲಿ ಐದು ತಿಂಗಳ ಹಸುಗೂಸು, 3 ವರ್ಷದ ಮಗು, 11 ವರ್ಷದ ಬಾಲಕಿ ಮತ್ತು 83 ವರ್ಷದ ಅಜ್ಜ, 75 ವರ್ಷದ ಅಜ್ಜಿಯೂ ಸೇರಿದ್ದಾರೆ.

ಮಂಗಳೂರಿನಿಂದ ಭಟ್ಕಳಕ್ಕೆ ಹರಡಿದ ಸೋಂಕು:

 ಭಟ್ಕಳದ ಓರ್ವ ಮಹಿಳೆ ತನ್ನ ಐದು ತಿಂಗಳ ಮಗುವಿನ ಚಿಕಿತ್ಸೆಗಾಗಿ ಮಂಗಳೂರಿನ ಪಡೀಲ್ ಸಮೀಪದ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪತಿ ಮತ್ತು 18 ವರ್ಷದ ತಂಗಿ ಜೊತೆಗಿದ್ದರು. ಅಲ್ಲಿಂದ ಅವರು ಮರಳಿ ಭಟ್ಕಳಕ್ಕೆ ಬಂದ ಕೆಲವು ದಿನಗಳ ನಂತರ ಅಂದರೆ ಮೇ 1ರಂದು 18 ವರ್ಷದ ಈ ಯುವತಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಭಟ್ಕಳದ ಆಸ್ಪತ್ರೆಗೆ ತಪಾಸಣೆಗೆ ತೆರಳಿದಾಗ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ರವಾನಿಸಲಾಗಿತ್ತು. ಅದರ ವರದಿ ಮೇ 5ರಂದು ಬಂದಿದ್ದು, ಯುವತಿಗೆ ಕೊರೋನ ಸೋಂಕು ತಗುಲಿರುವುದು ದೃಢಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಎಲ್ಲ ಸದಸ್ಯರನ್ನು ಹಾಗೂ ಆಕೆಯ ಸಂಪರ್ಕಕ್ಕೆ ಬಂದ ಎಲ್ಲರನ್ನು ಕ್ವಾರೆಂಟೈನ್‌ಗೆ ಒಳಪಡಿಸಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ಅದರ ವರದಿ ಪಾಸಿಟಿವ್ ಆಗಿ ಬಂದಿರುವುದು ಭಟ್ಕಳದಲ್ಲಿ ಆತಂಕಕ್ಕೆ ಕಾರಣವಾಗಿದೆ.

- Advertisement -
spot_img

Latest News

error: Content is protected !!