Saturday, June 27, 2026
Homeಕರಾವಳಿಮಂಗಳೂರು: ಕೊರೋನಾ ವಿರುದ್ಧ ಗೆದ್ದು ಬಂದ ಬೋಳೂರಿನ 62 ವರ್ಷದ ವೃದ್ಧ

ಮಂಗಳೂರು: ಕೊರೋನಾ ವಿರುದ್ಧ ಗೆದ್ದು ಬಂದ ಬೋಳೂರಿನ 62 ವರ್ಷದ ವೃದ್ಧ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ವೇಗವಾಗಿ ಕೊರೋನಾ ಹರಡುತ್ತಿರುವ ನಡುವೆಯೂ ಇಂದು ಮಂಗಳೂರಿನಲ್ಲಿ ಮೂವರು ಕೊರೊನಾ ಸೋಂಕು ಪೀಡಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಬೋಳೂರಿನ 62 ವರ್ಷದ ವೃದ್ಧ, 11 ವರ್ಷದ ಅವರ ಮೊಮ್ಮಗಳು ಹಾಗೂ ಬಂಟ್ವಾಳದ 16 ವರ್ಷದ ಬಾಲಕಿ ಮಹಾಮಾರಿ ಕೊರೊನಾ ವಿರುದ್ದ ಹೋರಾಡಿ ಗುಣಮುಖರಾಗಿದ್ದಾರೆ.

ಬೇಳೂರಿನ ಒಂದೇ ಕುಟುಂಬದ ಆರು ಜನರಿಗೆ ಕೊರೊನಾ ಬಾಧಿಸಿದ್ದು, 62 ವರ್ಷದ ವೃದ್ಧ ಕೊರೊನಾದಿಂದ ತನ್ನ ಪತ್ನಿ ಹಾಗೂ ಅತ್ತೆ (ಪತ್ನಿಯ ತಾಯಿ)ಯನ್ನು ಕಳೆದುಕೊಂಡಿದ್ದರು. ಇದೀಗ ವೃದ್ದ ಹಾಗೂ ಆತನ 11 ರ ಮೊಮ್ಮಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ ಬಾಲಕಿಯ ತಂದೆ ತಾಯಿಗೆ ಇನ್ನೂ ಕೊರೊನಾ ಚಿಕಿತ್ಸೆ ಮುಂದುವರಿಸಲಾಗಿದೆ.

ಅಜ್ಜ ಮತ್ತು ಮೊಮ್ಮಗಳನ್ನು ತಮ್ಮ ಮನೆಗೆ ಹಿಂತಿರುಗುತ್ತಿದ್ದಂತೆ ಬೋಳೂರಿನ ನಿವಾಸಿಗಳು ಅವರನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಮಾನಸಿಕ ಸ್ಥರ್ಯ ತುಂಬಿದರು. ಇದೇ ವೇಳೆ ಅವರು ವಾಸವಾಗಿದ್ದ ಮನೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಯಿತು

- Advertisement -

Latest News

error: Content is protected !!