Wednesday, June 3, 2026
Homeಕರಾವಳಿಮಂಗಳೂರು ಲಾಡ್ಜ್ ನಲ್ಲಿ ಹಿಂದೂ ಯುವತಿಯರ ಜೊತೆ ಪತ್ತೆಯಾದ ಮುಸ್ಲಿಂ ಯುವಕರ ಬಂಧನ: ಪೊಕ್ಸೊ ಪ್ರಕರಣ...

ಮಂಗಳೂರು ಲಾಡ್ಜ್ ನಲ್ಲಿ ಹಿಂದೂ ಯುವತಿಯರ ಜೊತೆ ಪತ್ತೆಯಾದ ಮುಸ್ಲಿಂ ಯುವಕರ ಬಂಧನ: ಪೊಕ್ಸೊ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ನಗರದ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ಎರಡು ದಿನಗಳ ಹಿಂದೆ ಹಿಂದೂ ಯುವತಿಯರಿಬ್ಬರ ಜೊತೆ ಪತ್ತೆಯಾದ ಮುಸ್ಲಿಂ ಯುವಕರ ಬಂಧನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವಕರ ಜೊತೆ ಇದ್ದ ಇಬ್ಬರು ಯುವತಿಯರಲ್ಲಿ ಒಬ್ಬಾಕೆ ಅಪ್ರಾಪ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಯುವಕರ ವಿರುದ್ಧ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಕುದ್ರೋಳಿಯ ಶೇಖ್ ಮುಹಮ್ಮದ್ ಮತ್ತು ಬೋಳಾರದ ಮುಹಮ್ಮದ್ ರಹೀಂ

ಕುದ್ರೋಳಿಯ ಶೇಖ್ ಮುಹಮ್ಮದ್ ಮತ್ತು ಬೋಳಾರದ ಮುಹಮ್ಮದ್ ರಹೀಂ ಬಂಧಿತ ಆರೋಪಿಗಳು. ಇನ್ನು ಇವರೊಂದಿಗೆ ಇದ್ದ ಯುವತಿಯರಲ್ಲಿ ಒಬ್ಬಾಕೆ ಅಪ್ರಾಪ್ತೆಯಾಗಿದ್ದು, ಹೊರಜಿಲ್ಲೆಯಿಂದ ಬಂದು ನಗರದ ಕಾಲೇಜೊಂದರಲ್ಲಿ ಕಲಿಯುತ್ತಿದ್ದಳು. ಇನ್ನೊಬ್ಬಳು ಸುರತ್ಕಲ್ ನಿವಾಸಿ ಎನ್ನಲಾಗಿದೆ.

ಸಾಯಿ ಪ್ಯಾಲೇಸ್ ಲಾಡ್ಜ್‌ನವರಿಗೆ ಸಂಶಯ ಬರಬಾರದೆಂದು ಎಂಬ ನಿಟ್ಟಿನಲ್ಲಿ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ರೂಮ್ ನಂಬರ್ 208 ರಲ್ಲಿ ಯುವತಿಯರು, ರೂಮ್ ನಂಬರ್ 407 ರಲ್ಲಿ ಯುವಕರು ರೂಮ್ ಪಡೆದಿದ್ದರು. ಹಾಗೆಯೆ ಇಬ್ಬರು ಯುವತಿಯರ ಪ್ರಯಾಣಕ್ಕೆ ಆಡಿ ಕಾರನ್ನು ಬಳಸಲಾಗಿದ್ದು, ಅದಕ್ಕೆ ಡಾಕ್ಟರ್ ಪಾಸ್ ಅಂಟಿಸಲಾಗಿತ್ತು. ಕಠಿಣ ವೀಕೆಂಡ್ ಕರ್ಫ್ಯೂ ವಿನಲ್ಲೂ ಸುಳ್ಳು ಮಾಹಿತಿ ನೀಡಿ ರೂಮ್ ಪಡೆದಿದ್ದರು.

ಪ್ರೀಪ್ಲಾನ್ ಮಾಡಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರ ಬಗ್ಗೆ ಹಿಂದೂ ಸಂಘಟನೆಗಳಿಂದ ಬಂದ ಮಾಹಿತಿಯಾನುಸಾರ ಸ್ಥಳಕ್ಕೆ ಅಗಲಿಸಿದ್ದ ಪೊಲೀಸರು ದಾಳಿ ನಡೆಸಿ 2 ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತೆ ವಿದ್ಯಾರ್ಥಿನಿಯನ್ನು ಮಹಿಳಾ ಪೊಲೀಸರು ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಕೊರೋನ ಮಾರ್ಗಸೂಚಿ ಉಲ್ಲಂಘಿಸಿ ಹೋಗಿ ಲಾಡ್ಜ್‌ನಲ್ಲಿ ಉಳಿದುಕೊಂಡ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!