Saturday, June 13, 2026
Homeಕರಾವಳಿಕ್ಲಬ್ ಹೌಸ್ ನಲ್ಲಿ ತುಳುವರಿಗೆ ಅವಮಾನ: ಕರಾವಳಿಗರನ್ನು ನಿಂದಿಸಿದ ಆಡಿಯೋ ವೈರಲ್

ಕ್ಲಬ್ ಹೌಸ್ ನಲ್ಲಿ ತುಳುವರಿಗೆ ಅವಮಾನ: ಕರಾವಳಿಗರನ್ನು ನಿಂದಿಸಿದ ಆಡಿಯೋ ವೈರಲ್

- Advertisement -
- Advertisement -

ಮಂಗಳೂರು: ಕ್ಲಬ್ ಹೌಸ್ ಸದ್ಯ ಸೋಷಿಯವ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವಿಚಾರ. ಇದೇ ಕ್ಲಬ್ ಹೌಸ್ ನಲ್ಲಿ ಕರಾವಳಿಯಯನ್ನು ನಿಂದಿರುವ ಆಡಿಯೋ ವೈರಲ್ ಆಗಿದೆ.

ಕ್ಲಬ್ ಹೌಸ್ ನಲ್ಲಿ ಕರಾವಳಿಗರ ಸೊಕ್ಕು ಮುರಿಯಬೇಕು. ಹಾಗೇ ಧರ್ಮಸ್ಥಳ, ಸುಬ್ರಮಣ್ಯ ಮುಂತಾದ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಹೋಗೋದನ್ನು ಕಡಿಮೆ ಮಾಡಬೇಕು ಅನ್ನೋ ಮೂಲಕ ತುಳುನಾಡಿನ ಬಗ್ಗೆ ಕ್ಲಬ್ ಹೌಸ್ ನಲ್ಲಿ ಕೆಂಡ ಕಾರಿದ್ದಾರೆ. ಇಷ್ಟೇ ಅಲ್ಲದೇ ನಿರೂಪಕಿ ನಟಿ ಅನುಶ್ರೀ ಬಗ್ಗೆಯೂ ಇದರಲ್ಲಿ ಮಾತನಾಡಲಾಗಿದೆ. ಆಕೆ ಕರಾವಳಿಯವರು . ಆಕೆ ಝೀ ಕನ್ನಡಕ್ಕೆ ಬಂದ ಮೇಲೆ ಅಲ್ಲಿ ಕೆಲಸ ಮಾಡುವ ತುಳುವರ ಸಂಖ್ಯೆ ಹೆಚ್ಚಾಗಿದೆ. ತುಳುವರನ್ನು ಬೆಂಬಲಿಸೋದನ್ನು ಕಡಿಮೆ ಮಾಡಬೇಕು. ಝೀ ಕನ್ನಡವನ್ನು ನೋಡಬಾರದು ಎಂಬುವುದಾಗಿ ಸಾಕಷ್ಟು ವಿಚಾರಗಳನ್ನು ಅಲ್ಲಿ ಮಾತನಾಡಲಾಗಿದೆ. ಇದು ಕರಾವಳಿಗರ ಕಣ್ಣು ಕೆಂಪಗಾಗಿಸಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ತುಳುವರು ಗರಂ ಆಗಿದ್ದಾರೆ.

ಕರುನಾಡು, ತುಳುನಾಡು ಹೆಸರಿನ ಕ್ಲಬ್ ಹೌಸ್ ನಲ್ಲಿ ನಡೆದ ಮಾತುಕತೆ ಈ ಆಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಕರಾವಳಿಗರಿಂದ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!