Sunday, June 7, 2026
Homeಕರಾವಳಿಮಂಗಳೂರಿನಲ್ಲಿ ಬಿಪಿ ಪರೀಕ್ಷೆಗೆಂದು ಬಂದ ಯುವಕ ಕುಸಿದು ಬಿದ್ದು ಸಾವು

ಮಂಗಳೂರಿನಲ್ಲಿ ಬಿಪಿ ಪರೀಕ್ಷೆಗೆಂದು ಬಂದ ಯುವಕ ಕುಸಿದು ಬಿದ್ದು ಸಾವು

- Advertisement -
- Advertisement -

ಮಂಗಳೂರು: ಬಿಪಿ ಪರೀಕ್ಷೆಗೆಂದು ಆಸ್ಪತ್ರೆಗೆ ಬಂದಿದ್ದ ಯುವಕನೊಬ್ಬ ಅಲ್ಲೆ ಕುಸಿದು ಬಿದ್ದು ಸಾವನಪ್ಪಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. ಕುಂಪಲ ಆಶ್ರಯ ಕೊಲನಿ ನಿವಾಸಿ ರಾಜೇಶ್ ರಾವ್ (32) ಮೃತ ದುರ್ದೈವಿ.

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ  ರಾಜೇಶ್ ಕಳೆದ ಶುಕ್ರವಾರದಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದು ವೈದ್ಯರು ಮತ್ತೆ ನಿನ್ನೆ ತಪಾಸಣೆಗೆ ಬರಲು ತಿಳಿಸಿದ್ದರು. ಈ ಹಿನ್ನಲೆ ಇಂದು ಬೆಳಿಗ್ಗೆ ರಾಜೇಶ್ ಅವರ ಸ್ನೇಹಿತರಾದ ಪ್ರಕಾಶ್ ಕುಂಪಲ ,ಶೈಲೇಶ್ ಮೊದಲಾದವರು ರಾಜೇಶನ್ನು ನಗರದ ಖಾಸಗಿ ಆಸ್ಪತ್ರೆಗೆ ಉನ್ನತ ತಪಾಸಣೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲಿ ರಕ್ತದೊತ್ತಡ ತಪಾಸಣೆ ನಡೆಸುವ ವೇಳೆ ರಾಜೇಶ್ ಅವರು ಕುಸಿದು ಬಿದ್ದು ಸ್ನೇಹಿತರ ಮುಂದೆಯೇ ಸಾವನ್ನಪ್ಪಿದ್ದಾರೆ. ರಾಜೇಶ್ ಅವರು ರಿಕ್ಷಾ ಚಾಲಕರಾಗಿದ್ದು, ಕುಂಪಲ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದು ಅಪಾರ ಸ್ನೇಹಿತರನ್ನು ಹೊಂದಿದ್ದರು. ಸ್ನೇಹಿತರೊಂದಿಗೆ ಅವರು ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿದ್ದರು. ರಾಜೇಶ್ ಅಕಾಲಿಕ ಅಗಲಿಕೆಗೆ ಹಿಂದೂ ಜಾಗರಣಾ ವೇದಿಕೆ ಸಂತಾಪ ವ್ಯಕ್ತಪಡಿಸಿದೆ. ಮೃತ ರಾಜೇಶ್ ತಂದೆ,ತಾಯಿ, ತಂಗಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!