Monday, June 8, 2026
Homeಕರಾವಳಿಮಂಗಳೂರು :ಆಜಾನ್ ಗೆ ವಿರುದ್ಧ ಮೊಳಗಿದ ಕೊರಗಜ್ಜನ ಭಕ್ತಿಗೀತೆ

ಮಂಗಳೂರು :ಆಜಾನ್ ಗೆ ವಿರುದ್ಧ ಮೊಳಗಿದ ಕೊರಗಜ್ಜನ ಭಕ್ತಿಗೀತೆ

- Advertisement -
- Advertisement -

ಮಂಗಳೂರು: ರಾಜ್ಯದಾದ್ಯಂತ ಆಜಾನ್ ವಿರುದ್ಧ ಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆ ಗಳು ಹೋರಾಟಕ್ಕಿಳಿದಿರುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಹೀಗಿರುವಾಗಲೇ ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದದಲ್ಲಿ ಮೈಕ್ ಅಳವಡಿಸಿ , ಆಜಾನ್ ಗೆ ಸೆಡ್ಡು ಹೊಡೆಯಲು ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ವರೆಗೆ ಕೊರಗಜ್ಜನ ಭಕ್ತಿ ಗೀತೆಗಳನ್ನು ಹಾಕಲಾಗಿದೆ.

ಮೂಡುಶೆಡ್ಡೆ ಮಸೀದಿ ಯಿಂದ ಸುಮಾರು 250 ಮೀಟರ್ ದೂರದಲ್ಲಿದ್ದು, ಇಲ್ಲಿರುವ ಅಯ್ಯಪ್ಪ ಭಕ್ತ ವೃಂದದ ಇಬ್ಬರು ಇಬ್ಬರು ಶ್ರೀ ರಾಮ ಸೇನೆಯ ಕಾರ್ಯಕರ್ತರು ಕೊರಗಜ್ಜ ಭಕ್ತಿಗೀತೆ ಹಾಕಿದ್ದಾರೆ ಎನ್ನಲಾಗಿದೆ. ಇದರ ನೇತೃತ್ವ ವನ್ನು ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ವಹಿಸಿದ್ದಾರೆ ಎನ್ನಲಾಗಿದ್ದು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!