Wednesday, July 15, 2026
Homeಕರಾವಳಿಮಂಗಳೂರುಮಂಗಳೂರು: ಕಾಟಿಪಳ್ಳದಲ್ಲಿ  ಮಸೀದಿಗೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು

ಮಂಗಳೂರು: ಕಾಟಿಪಳ್ಳದಲ್ಲಿ  ಮಸೀದಿಗೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು

- Advertisement -
- Advertisement -

ಮಂಗಳೂರು: ದುಷ್ಕರ್ಮಿಗಳು  ಮಸೀದಿಗೆ ಕಲ್ಲು ತೂರಾಟ ನಡೆಸಿದ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ. ಕಾಟಿಪಳ್ಳ 3ನೆ ಬ್ಲಾಕ್‌ ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಭಾನುವಾರ ರಾತ್ರಿ 11ರ ವೇಳೆಗೆ ಈ ಘಟನೆ ನಡೆದಿದ್ದು  ಎರಡು ಬೈಕ್‌ ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮಸೀದಿಯ ಕಿಟಕಿ ಗಳಿಗೆ ಕಲ್ಲು ತೂರಾಟದಿಂದ ಹಾನಿಯಾಗಿದೆ.

ಸುರತ್ಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ  ಧಾವಿಸಿ, ಮಸೀದಿಯ ಸಿಸಿಟಿವಿ ಸೇರಿದಂತೆ ಸಮೀಪದ ಸಿಸಿಟಿವಿ ಫೂಟೇಜ್‌ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.  ಇಂದು ಈದ್ ಮಿಲಾದ್  ಹಬ್ಬವೂ ಇರುವ ಕಾರಣ ಸುರತ್ಕಲ್ ಪ್ರದೇಶ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

- Advertisement -

Latest News

error: Content is protected !!